ನಾಪೋಕ್ಲು ಆ.15 : ಸ್ವಾತಂತ್ರ್ಯ ಅಮೃತ ಮಹೋತ್ಸವದ ಹರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ನಾಪೋಕ್ಲು ಗ್ರಾ.ಪಂ ವತಿಯಿಂದ ವಿವಿಧ ಶಾಲೆಗಳ ಸಹಯೋಗದೊಂದಿಗೆ ಪಟ್ಟಣದಲ್ಲಿ ಜಾಥಾ ನಡೆಯಿತು.
ನಾಪೋಕ್ಲು ಮಾರುಕಟ್ಟೆ ಬಳಿಯಿಂದ ಆರಂಭಗೊಂಡ ಜಾಥಾದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿದ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ವಿವಿಧ ರಾಷ್ಟ್ರಭಕ್ತಿಯ ಘೋಷವಾಕ್ಯ ಮೊಳಗಿಸಿದರು.
ಜಾಥಾದಲ್ಲಿ ದೇಶದ ಸ್ವಾತಂತ್ರ್ಯಹೋರಾಟಗಾರರ ವೇಷಧರಿಸಿದ ವಿದ್ಯಾರ್ಥಿಗಳು ವೀಕ್ಷಕರ ಗಮನ ಸೆಳೆದರು.
ಗ್ರಾ.ಪಂ ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷ ಮೊಹಮ್ಮದ್, ಪಿಡಿಒ ಚೋಂದಕ್ಕಿ, ಪಂಚಾಯಿತಿ ಸದಸ್ಯರು, ಕರ್ನಾಟಕ ಪಬ್ಲಿಕ್ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರು,ಇಂಟರಾಕ್ಟ್ ಕ್ಲಬ್ ಸದಸ್ಯರು, ನಿಸರ್ಗ ಇಕೋ ಕ್ಲಬ್ ಸದಸ್ಯರು, ಶಾಲಾ ಆಡಳಿತ ಮಂಡಳಿ ಪದಾಧಿಕಾರಿ ಸದಸ್ಯರು, ಬೇತು,ಚೆರಿಯಪರಂಬು, ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ








