ಮಡಿಕೇರಿ ಆ.15 : ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕುಶಾಲನಗರ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಮತ್ತು ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಕೆಪಿಸಿಸಿ ಸಂಯೋಜಕ ಹೆಚ್.ಕೆ ನಟೇಶ್ ಗೌಡ, ಪುರಸಭೆ ಸದಸ್ಯ ಶೇಕ್ ಕಲೀಮುಲ್ಲ, ಎಮ್.ಕೆ ಸುಂದರೇಶ್, ಕುಶಾಲನಗರ ನಗರ ಕಾಂಗ್ರೆಸ್ ಉಪಾಧ್ಯಕ್ಷ ಹೆಚ್.ಕೆ ಶಿವಶಂಕರ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಕುಮಾರ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಮ್.ಎಮ್ ಪ್ರಕಾಶ್ ಹಾಗೂ ಕಾಂಗ್ರೆಸ್ ಮುಖಂಡರಾದ ಎಮ್.ವಿ ಹರೀಶ್, ನವೀನ್, ಮುಸ್ತಫ, ಗಯಾಜ್, ರಂಜನ್, ಇರ್ಫಾನ್, ಆನಂದ್ ಗೌಡ, ರವಿ, ಲಿಂಗಮ್, ಪುನೀತ್, ಊರೊಳನ ಸುರೇಶ್ ಹಾಗೂ ಪ್ರಮುಖರು ಹಾಜರಿದ್ದರು.








