Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೆಎಸ್‌ಐಸಿ ಆವರಣದಲ್ಲಿ ಸ್ಡೇಡಿಯಂ ನಿರ್ಮಾಣ ಯೋಜನೆಗೆ ತಿಲಾಂಜಲಿ : ಸಂಘಟಿತ ಹೋರಾಟಕ್ಕೆ ಸಂದ ಜಯ : ಧನ್ಯವಾದ ಸಲ್ಲಿಸಿದ ಸಂಸದ ಯದುವೀರ್‌ ಒಡೆಯರ್‌*
  • *ಮಡಿಕೇರಿ : ಮಾ.11 ರಂದು ನಗರಸಭೆಯ ಆಯವ್ಯಯ ಸಭೆ*
  • *ಮಾ.12ರ ಹೋರಾಟಕ್ಕೆ ಸಿಪಿಐಎಂ ಪಕ್ಷದ ವಿರಾಜಪೇಟೆ ಘಟಕ ಬೆಂಬಲ : ಕೆ.ಎಸ್ ರಮೇಶ್*
  • *ಕ.ಸಾ.ಪ ದತ್ತಿ ಕಾರ್ಯಕ್ರಮ : ಕೊಡಗಿನ ಸಂಸ್ಕೃತಿಯ ಮೂಲ ಸ್ವರೂಪ ಪ್ರಕೃತಿ ಆರಾಧನೆ : ಮಧೋಶ್ ಪೂವಯ್ಯ*
  • *ಪಂಜರಪೇಟೆ ಕೊಡವ ಕೇರಿಯಿಂದ ವೃದ್ಧಾಶ್ರಮಕ್ಕೆ ಭೇಟಿ*
  • *ಕೊಡವ ಕೂಟಾಳಿಯಡ ಕೂಟದಿಂದ ಸಾಧಕ ಮಹಿಳೆಯರಿಗೆ ಸನ್ಮಾನ*
  • *ಆಫ್ ರೋಡ್ ಚಾಲೆಂಜರ್ಸ್ ಸ್ಪರ್ಧೆ : ಮಡಿಕೇರಿಯ ಜತೀನ್ ಕರ್ಕೆರ ಹಾಗೂ ಹಾರ್ಧಿಕ್ ಕರ್ಕೆರ ದ್ವಿತೀಯ*
  • *ಸೋಮವಾರಪೇಟೆಯಲ್ಲಿ ಬಿಜೆಪಿ ಮಂಡಲ ಯುವ ಮೋರ್ಚಾದಿಂದ ಪ್ರತಿಭಟನೆ*
  • *ಕಾಡಾನೆ ದಾಳಿಗೆ ಗ್ರಾ.ಪಂ ಮಾಜಿ ಸದಸ್ಯೆ ಬಲಿ*
  • *ಅನಾರೋಗ್ಯದಿಂದ ಅಭಿ ಸಾವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ನನ್ನ ಚಿಂತನೆ ಕ್ಷೇತ್ರದ ಹಾಗೂ ಜನರ ಅಭಿವೃದ್ದಿ ಮಾತ್ರ : ಶಾಸಕ ಎ.ಎಸ್.ಪೊನ್ನಣ್ಣ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ನನ್ನ ಚಿಂತನೆ ಕ್ಷೇತ್ರದ ಹಾಗೂ ಜನರ ಅಭಿವೃದ್ದಿ ಮಾತ್ರ : ಶಾಸಕ ಎ.ಎಸ್.ಪೊನ್ನಣ್ಣ*

ಆಗಷ್ಟ್ 15, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.15 : ನನ್ನ ಮುಂದಿನ 5 ವರ್ಷದ ಅವಧಿಯಲ್ಲಿ ನನ್ನ ಚಿಂತನೆ ಈ ಕ್ಷೇತ್ರದ ಅಭಿವೃದ್ದಿ ಹಾಗೂ ಜನರ ಅಭಿವೃದ್ದಿಗೆ ಮೀಸಲಾಗಿರುತ್ತದೆ. ಜನರು ಕೊಟ್ಟ ತೀರ್ಪಿಗೆ ಕಂಕಣಬದ್ದವಾಗಿ ಕೆಲಸ ಮಾಡುವೆ, ಎಲ್ಲಿಯೂ ಕಪ್ಪುಚುಕ್ಕೆ ಬಾರದಂತೆ ಎಚ್ಚರ ವಹಿಸುತ್ತೇನೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೊಡವ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಕ್ಕಡ ಒತ್ತೊರ್ಮೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚುನಾಚಣೆ ಮೆ.13ರಂದು ಮುಗಿದಿದೆ. ಪರವಿರೋಧಗಳು ಅಂದಿಗೆ ಕೊನೆಯಾಗಿದೆ. ಮುಂದೆ ಜನರ ಕಷ್ಟಗಳಿಗೆ ಸ್ಪಂಧಿಸುವುದು ಕ್ಷೇತ್ರದ ಅಭಿವೃದ್ಧಿಯನ್ನು ಮಾಡುವುದೇ ನಮ್ಮ ಮುಂದಿರುವ ಮೂಲ ಉದ್ದೇಶ. ಅಭಿವೃದ್ದಿಯ ಚಿಂತನೆಯಲ್ಲಿ ತಮ್ಮ ಸಲಹೆ ಸೂಚನೆಗಳು ನಿರಂತರವಾಗಿರಲಿ ಸದಾ ನಾನು ನಿಮ್ಮೊಂದಿಗಿರುವೆ ಎಂದು ಸಮುದಾಯ ಭಾಂದವರಿಗೆ ಭರವಸೆ ನೀಡಿದರು.
ನಾವೆಲ್ಲರೂ ಪರಸ್ಪರ ಒಗ್ಗಟ್ಟು, ಹೊಂದಾಣಿಕೆಯೊಂದಿಗೆ ಜೀವನ ಸಾಗಿಸಬೇಕು ಹಾಗೂ ಜೀವಿತಾವಧಿಯಲ್ಲಿ ಆದಷ್ಟು ಸಮಾಜಮುಖಿ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿ ಬದುಕನ್ನು ಅರ್ಥ ಪೂರ್ಣಗೊಳಿಸಬೇಕು. ನಮ್ಮ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವಲ್ಲಿ ನಾವು ಮುನ್ನಡಿಯಿಡಬೇಕು ಎಂದು ಕಿವಿಮಾತುಗಳನ್ನಾಡಿದರು.
ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ಮಾತನಾಡಿ ಕಳೆದ 20 ವರ್ಷಗಳಿಂದ ಉತ್ತಮ ಶಾಸಕನಿಗಾಗಿ ಎದುರು ನೋಡುತ್ತಿದ್ದೇವು. ಇದೀಗ ಕ್ಷೇತ್ರದ ಜನರ ಸೇವೆಗಾಗಿ ಅಜ್ಜಿಕುಟ್ಟಿರ ಕುಟುಂಬದಿಂದ ಪೊನ್ನಣ್ಣ ಆಗಮಿಸಿದ್ದಾರೆ. ಸಾಕಷ್ಟು ಒತ್ತಡದ ನಡುವೆ ಜನರ ಸೇವೆಗಾಗಿ ಮುಂದೆ ಬಂದಿದ್ದಾರೆ. ಇವರೊಂದಿಗೆ ನಾವು ಕೈಜೋಡಿಸಬೇಕು. ಇದರಿಂದ ಇವರಿಗೆ ಶಕ್ತಿ ನೀಡಿದಂತಾಗುತ್ತದೆ. ರಾಜಕೀಯವನ್ನು ಬದಿಗೊತ್ತಿ ಉತ್ತಮ ವ್ಯಕ್ತಿತ್ವವುಳ್ಳ ಪೊನ್ನಣ್ಣನವರೊಂದಿಗೆ ಸಮುದಾಯ ಭಾಂದವರು ಸದಾ ನಿಲ್ಲುವಂತಾಗಬೇಕೆಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ ಕೊಡವ ಸಂಪ್ರದಾಯ ವಿಶಿಷ್ಟವಾಗಿದ್ದು ಪ್ರತಿಯೊಂದರಲ್ಲೂ ತನ್ನತನವನ್ನು ಕಾಪಾಡಿಕೊಂಡು ಬಂದಿದೆ. ಇದು ಮುಂದಿನ ಪೀಳಿಗೆಗೂ ಮುಂದುವರೆಯಬೇಕು. ಅದೇ ರೀತಿ ನಮಗೆ ಇಂದು ಉತ್ತಮ ಶಾಸಕರು ನಮ್ಮವರೇ ಸಿಕ್ಕಿದ್ದಾರೆ. ಅದು ನಮಗೆ ಹೆಮ್ಮೆ. ಪೊನ್ನಣ್ಣ ಅವರದ್ದು ಅದ್ಭುತ ವ್ಯಕ್ತಿತ್ವ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಮ್ಮಾ ಬಾಣೆ, ಕೋವಿ ಹಕ್ಕು ಮುಂತಾದ ವಿಚಾರಗಳಲ್ಲಿ ಕೊಡವರಿಗೆ ಅನ್ಯಾಯವಾಗದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಹಲವಾರು ಬೇಡಿಕೆಗಳು ಶಾಸಕರ ಮುತುವರ್ಜಿಯಿಂದ ಮುಂದಿನ ದಿನಗಳಲ್ಲಿ ಈಡೇರಲಿದೆ ಎಂದರಲ್ಲದೆ ನಮ್ಮೆಲ್ಲರ ಹಾರೈಕೆ ಅವರನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿದೆ. ಅದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಭಾಂದವರು ಎಲ್ಲವನ್ನು ರಾಜಕೀಯವಾಗಿ ನೋಡದೆ ವ್ಯಕ್ತಿಯ ಗುಣಗಳಿಗೆ ಬೆಲೆ ನೀಡಬೇಕು. ಉತ್ತಮ ಶಾಸಕರಾಗಿರುವ ಪೊನ್ನಣ್ಣನವರಿಗೆ ಸಮುಧಾಯ ಭಾಂದವರು ಬೆಂಬಲ ನೀಡಬೇಕು. ಇವರಿಗೆ ದೇವರು ಹಾಗೂ ಜನರ ಆಶೀರ್ವಾದ ಯಾವಾಗಲೂ ಇರಬೇಕು ಎಂದರಲ್ಲದೆ ಕೊಡವ ಪೊಮ್ಮಕ್ಕ ಎಂಬುದೇ ನಮ್ಮ ಹೆಮ್ಮೆ. ಕೂಟದ ಮೂಲಕ ಉತ್ತಮ ಕಾರ್ಯಮಾಡುತ್ತಿದ್ದು ನಮ್ಮಲ್ಲಿರುವ ಪ್ರತಿಭೆಗಳಿಗೆ ಅವಕಾಶವನ್ನು ಒದಗಿಸುವಂತಹ ಕಾರ್ಯವನ್ನು ಮಾಡಲಾಗುತ್ತಿದೆ. ಮಹಿಳೆಯರು ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದುಕೊಂದು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಲು ಕೂಟವನ್ನು ರಚಿಸಿದ್ದೇವೆ. ಕೂಟದ ಮೂಲಕ ಕೊಡವ ಆಚಾರ ವಿಚಾರ ಪದ್ಧತಿ ಪರಂಪರೆಯನ್ನೂ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದೇವೆ. ಮಹಿಳೆಯರು ಕೇವಲ ಅಡುಗೆ ಮನೆ ಕೆಲಸಕ್ಕೆ ಸೀಮಿತವಾಗದೆ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕಲು ಒಂದು ವೇದಿಕೆಯನ್ನು ಈ ಮೂಲಕ ಕಲ್ಪಿಸುವ ಕೆಲಸವಾಗುತ್ತದೆ. ಸಾಮಾಜಿಕ ಸೇವಾ ಕಾರ್ಯವನ್ನು ಕೂಡ ಒಕ್ಕೂಟದ ಮುಖಾಂತರ ಮಾಡಿಕೊಂಡು ಬರುತ್ತಿದ್ದೇವೆ ಎಂದರು.
ಕೊಡವರಲ್ಲಿ ಇರುವಷ್ಟು ಹುರುಪು, ಛಲ, ಇಚ್ಛಾಶಕ್ತಿ ಇನ್ನೆಲ್ಲೂ ಇಲ್ಲ. ಕೊಡವಾಮೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು. ಪ್ರಪಂಚದ ಯಾವ ಸಂಸ್ಕೃತಿಯ ಜೊತೆಯಲ್ಲಿ ಕೊಡವ ಸಂಸ್ಕೃತಿಯನ್ನು ಹೋಲಿಕೆ ಮಾಡಲು ಸಾದ್ಯವಿಲ್ಲ. ಅಂತಹ ವಿಭಿನ್ನ ಸಂಸ್ಕೃತಿಯಲ್ಲಿ ಹುಟ್ಟಿದ ನಾವೇ ಧನ್ಯರು. ಕೊಡವರಿಗೆ ತನ್ನದೆಯಾದ ಹಿರಿಮೆ ಗರಿಮೆ ಇದೆ. ಇಂದಿನ ಯುವ ಪೀಳಿಗೆ ಕೊಡವ ಸಂಸ್ಕೃತಿಯನ್ನು ಉಳಿಸುವ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭ ಮುಖ್ಯ ಅತಿಥಿಗಳಾಗಿದ್ದ ಶಾಸಕ ಪೊನ್ನಣ್ಣ ಹಾಗೂ ಕಾಂಚನಾ ಪೊನ್ನಣ್ಣ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ದೇಶದಲ್ಲೇ ವಿಭಿನ್ನ ಸಂಸ್ಕೃತಿ, ಆಚಾರಗಳನ್ನು ಹೊಂದಿರುವ ಕೊಡವರ ಸಾಂಪ್ರಾದಾಯಿಕ ಪದ್ದತಿಯಂತೆ ತಪ್ಪಡಕ ಕಟ್ಟಿ ಕಾವೇರಿ ಮಾತೆಗೆ ನಮಿಸುವುದರ ಮುಖಾಂತರ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲಪಂಡ ತಾರ ಅವರು ತಪ್ಪಡಕ ಕಟ್ಟುವ ಕಾರ್ಯಕ್ರಮ ನಡೆಸಿದರು.
ಕಾರ್ಯಕ್ರಮದ ಅಂಗವಾಗಿ ಕೊಡವ ಸಾಂಪ್ರಾದಾಯಿಕ ವಾದ್ಯದೊಂದಿಗೆ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು. ಪೊನ್ನಕ್ಕ ಗುಂಪಿನ ಸದಸ್ಯರು ಕೊಡವ ನೃತ್ಯಗಳನ್ನು ಮಾಡಿ ಗಮನ ಸೆಳೆದರು.
ಶಾಸಕ ಪೊನ್ನಣ್ಣ ಅವರ ಅವರ ವ್ಯಕ್ತಿ ಪರಿಚಯವನ್ನು ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ ಮಾಡಿದರು. ವೇದಿಕೆಯಲ್ಲಿ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ತೀತಿರ ಧರ್ಮಜ ಉತ್ತಪ್ಪ, ಅಜ್ಜಿಕುಟ್ಟಿರ ಕಾಂಚನಾ ಪೊನ್ನಣ್ಣ, ಉಪಾಧ್ಯಕ್ಷರಾದ ಅಮ್ಮಣಿಚಂಡ ಈಶ್ವರಿ ಗಂಗಮ್ಮ, ಸಲಹಾ ಸಮಿತಿ ಸದಸ್ಯೆ ಬಿದ್ದಂಡ ರಾಣಿ ಉತ್ತಯ್ಯ, ನಾಯಕಂಡ ಬೇಬಿ ಚಿಣ್ಣಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಹ ಕಾರ್ಯದರ್ಶಿ ಮಾಳೇಟಿರ ಕವಿತಾ ಶ್ರೀನಿವಾಸ್, ಖಜಾಂಚಿ ತಾತಂಡ ಯಶು ಕಭೀರ್ ಸೇರಿದಂತೆ ಒಕ್ಕೂಟದ ಎಲ್ಲ ಸದಸ್ಯರು ಹಾಜರಿದ್ದರು.
ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ಸ್ವಾಗತಿಸಿ ನಿರೂಪಿಸಿದರೆ ತಾತಂಡ ಜ್ಯೋತಿ ಪ್ರಕಾಶ್ ವಂದಿಸಿದರು.
ಪೊನ್ನಕ್ಕ ಗುಂಪಿನ ಸದಸ್ಯರಿಂದ ವೀರಯೋಧರಿಗೆ ನಮನ ಸಲ್ಲಿಸಲಾಯಿತು. ಕೊನೆಗೆ ಸಾಂಪ್ರಾದಾಯಿಕ ಕೊಡವ ವಾಲಗತಾಟ್ ಪ್ರದರ್ಶನಗೊಂಡಿತು. ಒಕ್ಕೂಟದ ಸದಸ್ಯೆಯರು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಂಜಿಸಿದರು. ಕಕ್ಕಡ ವಿಶೇಷತೆಯಾಗಿ ವಿವಿಧ ರೀತಿಯ ಭಕ್ಷ್ಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು.  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೆಎಸ್‌ಐಸಿ ಆವರಣದಲ್ಲಿ ಸ್ಡೇಡಿಯಂ ನಿರ್ಮಾಣ ಯೋಜನೆಗೆ ತಿಲಾಂಜಲಿ : ಸಂಘಟಿತ ಹೋರಾಟಕ್ಕೆ ಸಂದ ಜಯ : ಧನ್ಯವಾದ ಸಲ್ಲಿಸಿದ ಸಂಸದ ಯದುವೀರ್‌ ಒಡೆಯರ್‌*

ಮಾರ್ಚ್ 9, 2026

*ಮಡಿಕೇರಿ : ಮಾ.11 ರಂದು ನಗರಸಭೆಯ ಆಯವ್ಯಯ ಸಭೆ*

ಮಾರ್ಚ್ 9, 2026

*ಮಾ.12ರ ಹೋರಾಟಕ್ಕೆ ಸಿಪಿಐಎಂ ಪಕ್ಷದ ವಿರಾಜಪೇಟೆ ಘಟಕ ಬೆಂಬಲ : ಕೆ.ಎಸ್ ರಮೇಶ್*

ಮಾರ್ಚ್ 9, 2026

*ಮಡಿಕೇರಿ : ಮಾ.11 ರಂದು ನಗರಸಭೆಯ ಆಯವ್ಯಯ ಸಭೆ*

ಮಾರ್ಚ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮಾ.9 NEWS DESK : ನಗರಸಭೆಯ 2026-27ನೇ ಸಾಲಿನ ಆಯವ್ಯಯ ಮಂಜೂರಾತಿಗೆ ಮಾರ್ಚ್, 11 ರಂದು ಬೆಳಗ್ಗೆ 11.30…

*ಮಾ.12ರ ಹೋರಾಟಕ್ಕೆ ಸಿಪಿಐಎಂ ಪಕ್ಷದ ವಿರಾಜಪೇಟೆ ಘಟಕ ಬೆಂಬಲ : ಕೆ.ಎಸ್ ರಮೇಶ್*

ಮಾರ್ಚ್ 9, 2026

*ಕ.ಸಾ.ಪ ದತ್ತಿ ಕಾರ್ಯಕ್ರಮ : ಕೊಡಗಿನ ಸಂಸ್ಕೃತಿಯ ಮೂಲ ಸ್ವರೂಪ ಪ್ರಕೃತಿ ಆರಾಧನೆ : ಮಧೋಶ್ ಪೂವಯ್ಯ*

ಮಾರ್ಚ್ 9, 2026

*ಪಂಜರಪೇಟೆ ಕೊಡವ ಕೇರಿಯಿಂದ ವೃದ್ಧಾಶ್ರಮಕ್ಕೆ ಭೇಟಿ*

ಮಾರ್ಚ್ 9, 2026

*ಕೊಡವ ಕೂಟಾಳಿಯಡ ಕೂಟದಿಂದ ಸಾಧಕ ಮಹಿಳೆಯರಿಗೆ ಸನ್ಮಾನ*

ಮಾರ್ಚ್ 9, 2026

*ಆಫ್ ರೋಡ್ ಚಾಲೆಂಜರ್ಸ್ ಸ್ಪರ್ಧೆ : ಮಡಿಕೇರಿಯ ಜತೀನ್ ಕರ್ಕೆರ ಹಾಗೂ ಹಾರ್ಧಿಕ್ ಕರ್ಕೆರ ದ್ವಿತೀಯ*

ಮಾರ್ಚ್ 9, 2026

*ಸೋಮವಾರಪೇಟೆಯಲ್ಲಿ ಬಿಜೆಪಿ ಮಂಡಲ ಯುವ ಮೋರ್ಚಾದಿಂದ ಪ್ರತಿಭಟನೆ*

ಮಾರ್ಚ್ 9, 2026

*ಕಾಡಾನೆ ದಾಳಿಗೆ ಗ್ರಾ.ಪಂ ಮಾಜಿ ಸದಸ್ಯೆ ಬಲಿ*

ಮಾರ್ಚ್ 9, 2026

*ಅನಾರೋಗ್ಯದಿಂದ ಅಭಿ ಸಾವು*

ಮಾರ್ಚ್ 9, 2026

*ಕಾಡಾನೆ ಹಾವಳಿ ನಿಯಂತ್ರಿಸಲು ಸರ್ಕಾರ ವಿಫಲ : ಕೂಡಲೇ ಕೊಡಗಿಗೆ ಅರಣ್ಯ ಸಚಿವರು ಭೇಟಿ ನೀಡಲಿ : ಎಡಿಕೇರಿ ಪ್ರಸನ್ನ ಒತ್ತಾಯ*

ಮಾರ್ಚ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.