ಮಡಿಕೇರಿ ಆ.15 : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವವನ್ನು ಮಡಿಕೇರಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವದ ಕುರಿತು ತಿಳಿಸಿದರು.
ಮಡಿಕೇರಿ ಮಕ್ಕಾ ಮಸೀದಿ ಇಮಾಮರಾದ ಮೌಲಾನ ಅಬ್ದುಲ್ ಹಕ್ಕೀಂ, ಎಸ್‍ಡಿಪಿಐ ನಗರಾಧ್ಯಕ್ಷ ರಿಜ್ವಾನ್, ನಗರಸಭಾ ಸದಸ್ಯರಾದ ಅಮಿನ್ ಮೊಹಿಸಿನ್, ಮನ್ಸೂರ್, ಬಶೀರ್, ಮೇರಿ, ನೀಮ ಅರ್ಷದ್, ಜಿಲ್ಲಾ ಸಮಿತಿ ಮತ್ತು ನಗರ ಸಮಿತಿಯ ಮುಖಂಡರು ಪಾಲ್ಗೊಂಡಿದ್ದರು.









