ಮಡಿಕೇರಿ ಆ.15 : ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಕರ್ತವ್ಯವನ್ನು ನಿಷ್ಠಯಿಂದ ನಿರ್ವಹಿಸಬೇಕು ಎಂದು ಕೊಡಗು ಜಿಲ್ಲಾ ಪಂಚಾಯತ್ ನ ಯ ಮುಖ್ಯ ಕಾರ್ಯನಿರ್ವಹಾಕ ಅಧಿಕಾರಿ ವರ್ಣಿತ್ ನೇಗಿ ಅವರು ಹೇಳಿದರು.
ನಗರದ ಕೊಡಗು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಈಗಾಗಲೇ ಮೇರಿ ಮಾಟಿ ಮೇರಾ ದೇಶ ಅಭಿಯಾನದ ಅಂಗವಾಗಿ ಜಿಲ್ಲೆಯ 103 ಗ್ರಾ.ಪಂ.ಗಳಲ್ಲಿಯೂ ಕಳೆದ ಒಂದು ವಾರದಿಂದ ವಿನೂತನ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗಿದೆ, ಸ್ವಾತಂತ್ರ್ಯಕ್ಕಾಗಿ ಮತ್ತು ದೇಶ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸಿ ಶಿಲಾಫಲಕವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
103 ಗ್ರಾ.ಪಂ.ಗಳಲ್ಲಿ ಆಚರಣೆ: ಸರ್ಕಾರದ ನಿರ್ದೇಶನದಂತೆ ಮೇರಿ ಮಾಟಿ ಮೇರಾ ದೇಶ್ ಅಭಿಯಾನದ ಅಂಗವಾಗಿ ಜಿಲ್ಲೆಯ 103 ಗ್ರಾ.ಪಂ.ಗಳಲ್ಲಿಯೂ 77 ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸ್ವಾತಂತ್ರ್ಯದ ಅಮೃತ ಕಾಲದ ಹಿನ್ನೆಲೆ 75 ಗಿಡಗಳನ್ನು ನೆಡುವ ಮೂಲಕ ಅಮೃತ ವಾಟಿಕ, ಪಂಚಪ್ರಾಣ ಪ್ರತಿಜ್ಞೆ, ಸ್ವಚ್ಛತಾ ಪ್ರತಿಜ್ಞೆಗಳನ್ನು ಸ್ವೀಕರಿಸಲಾಯಿತು. ಅಲ್ಲದೇ ಗ್ರಾಮ ಮಟ್ಟದಲ್ಲಿ ಗ್ರಾಮೀಣ ಕ್ರೀಡೆಗಳೊಂದಿಗೆ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.








