ಮಡಿಕೇರಿ ಆ.15 : ಹರಪ್ಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಸುಂಟಿಕೊಪ್ಪ ಘಟಕಕ್ಕೆ ಚಾಲನೆ ನೀಡಲಾಗಿದೆ. ಸ್ವಸ್ಥ ಶಾಲೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಮೂಲಕ ಸಂಘವನ್ನು ಆರಂಭಿಸಲಾಯಿತು.
ಧ್ವಜಾರೋಹಣದ ನಂತರ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದ ಪ್ರಮುಖರು ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನೆರೆದಿದ್ದ ವಿದ್ಯಾರ್ಥಿಗಳಿಗೆ ಹಣ್ಣು ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್, ದೇಶದ ಅಭ್ಯುದಯಕ್ಕಾಗಿ ಎಲ್ಲರೂ ಶ್ರಮಿಸುವಂತೆ ಕರೆ ನೀಡಿದರು.
ಸಮಾಜ ಸೇವಕ ಹರಪ್ಪಳ್ಳಿ ರವೀಂದ್ರ ಅವರ ಅಭಿಮಾನಿಗಳ ಸಂಘವನ್ನು ಆರಂಭಿಸಲಾಗಿದ್ದು, ಈ ಸಂಘದ ಮೂಲಕ ಸಾಮಾಜಿಕ ಕಳಕಳಿ ಮತ್ತು ಜನಪರವಾದ ಕಾರ್ಯಗಳು ನಡೆಯಲಿದೆ ಎಂದರು.
ಮಹಿಳಾ ಸಂಘ ಸೇರಿದಂತೆ ಎಲ್ಲಾ ಸಂಘಗಳ ಅಧ್ಯಕ್ಷರುಗಳು ಅಭಿಮಾನಿಗಳ ಸಂಘದಲ್ಲಿ ಸದಸ್ಯರಾಗಿರುತ್ತಾರೆ. ಯಾವುದೇ ಸಮಸ್ಯೆ ಎದುರಾದರೂ ಸಂಘ ತಕ್ಷಣ ಸ್ಪಂದಿಸಲಿದೆ ಎಂದು ಉಸ್ಮಾನ್ ತಿಳಿಸಿದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಗ್ರಾ.ಪಂ ಸದಸ್ಯರುಗಳಾದ ಪ್ರಸಾದ್ ಕುಟ್ಟಪ್ಪ, ಅಲಿಕುಟ್ಟಿ, ಶಬೀರ್, ತಾ.ಪಂ ಮಾಜಿ ಸದಸ್ಯ ರಫೀಕ್ ಮಾಸ್ಟರ್, ಹರಪಳ್ಳಿ ರವೀಂದ್ರ ಅಭಿಮಾನಿ ಸಂಘದ ಗೌರವ ಸಲಹೆಗಾರ ಖಾಸಿಂ, ಸದಸ್ಯರುಗಳಾದ ಸತೀಶ್, ಹರೀಶ್, ಅಬುಬಕ್ಕರ್, ಇಬ್ರಾಹಿಂ ಮತ್ತಿತರರು ಹಾಜರಿದ್ದರು.









