ಕುಶಾಲನಗರ, ಆ.15 : ನಮ್ಮ ರಾಷ್ಟ್ರ ಸ್ವತಂತ್ರವಾಗಲು ಕನಸು ಕಂಡಿದ್ದ ನಮ್ಮೆಲ್ಲ ಹುತಾತ್ಮರ ಕಷ್ಟ-ನೋವುಗಳನ್ನು ನಾವು ಅರ್ಥೈಸಿಕೊಂಡು ಮುಂದೆ ಸಾಗಬೇಕು. ಅವರ ಪ್ರಾಣತ್ಯಾಗವನ್ನು ಮನನ ಮಾಡಿಕೊಂಡು
ರಾಷ್ಟ್ರ ರಕ್ಷಣಾ ಕಾರ್ಯಕ್ಕೆ ಪಣ ತೊಡಬೇಕು ಎಂದು ಕುಶಾಲನಗರದ ನಿವೃತ್ತ ಸಿಪಾಯಿ ಕಾನೇಹಿತ್ಲು ಕೆ.ಕಾಳಪ್ಪ ಹೇಳಿದರು.
ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ( ಕೂಡ್ಲೂರು ) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ವಿದ್ಯಾರ್ಥಿ ಸಂಘ, ಮತದಾರರ ಸಾಕ್ಷರತಾ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.) ಘಟಕದ ವತಿಯಿಂದ ಸುಂಟಿಕೊಪ್ಪ ಜೆಸಿಐ ಹಾಗೂ ಕುಶಾಲನಗರ ಕಾವೇರಿ ಜೆಸಿಐ ಸಂಸ್ಥೆಯ ಆಶ್ರಯದಲ್ಲಿ ಏರ್ಪಡಿಸಿದ್ದ 77 ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ರಾಷ್ಟ್ರದ ಏಕತೆಗೆ ಯುವಜನಾಂಗ ಪಣತೊಡಬೇಕು ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷ ಎಸ್.ಎನ್.ಪುಟ್ಟಸ್ವಾಮಿ ಮಾತನಾಡಿ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ- ಬಲಿದಾನವನ್ನು ಸ್ಮರಿಸುವ ಮೂಲಕ ನಮ್ಮ ರಾಷ್ಟ್ರದ ಪ್ರಗತಿ ಮತ್ತು ಭಾವೈಕತೆಗೆ ಶ್ರಮಿಸಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ವಿದ್ಯಾರ್ಥಿಗಳು ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಬೇಕು ಎಂದರು.
ಕುಶಾಲನಗರ ಕಾವೇರಿ ಜೆಸಿಐ ಸಂಸ್ಥೆಯ ಅಧ್ಯಕ್ಷ ಎಂ.ಜೆ.ರಜನೀಕಾಂತ್, ಗ್ರಾಮ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಕೆ.ಪವನ್ ಕುಮಾರ್ ಮಾತನಾಡಿದರು.
ದಿನದ ಮಹತ್ವದ ಕುರಿತು ಶಿಕ್ಷಕಿ ಬಿ.ಎಸ್.ಅನ್ಸಿಲಾ ರೇಖಾ ಮಾತನಾಡಿದರು.
ಎಸ್ ಡಿ ಎಂ ಸಿ ಸದಸ್ಯರಾದ ಜವರಯ್ಯ, ಎಂ.ನಾಗರಾಜು, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ದಯಾನಂದ ಪ್ರಕಾಶ್, ಜಿಲ್ಲಾ ಸ್ಕೌಟ್ಸ್ , ಗೈಡ್ಸ್ ಸಂಸ್ಥೆಯ ಕ್ಯಾಪ್ಟನ್ ಸಿ.ಎಂ.ಸುಲೋಚನ,
ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಡಿ.ರಮ್ಯ,ರೇಖಾ, ಎಸ್.ಎಂ.ಗೀತಾ, ಬಿ.ಎನ್.ಸುಜಾತ ಇದ್ದರು.
ಇದೇ ವೇಳೆ ನಿವೃತ್ತ ಸಿಪಾಯಿ, ಸಮಾಜ ಸೇವಕ ಕಾನೇಹಿತ್ಲು ಕೆ.ಕಾಳಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆ ಪ್ರತಿಬಿಂಬಿಸುವ ದೇಶ ಭಕ್ತಿ ಗೀತೆ, ಗೀತಾ ಗಾಯನ ಹಾಗೂ
ಸಾಮೂಹಿಕ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆದರು.









