ಮಡಿಕೇರಿ ಆ.16 : ಮಡಿಕೇರಿಯ ಪುಟಾಣಿ ನಗರದ ಅಂಗನವಾಡಿ ಕೇಂದ್ರದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಜರುಗಿತು.
ಶಿಕ್ಷಕಿ ಪೊನ್ನಮ್ಮ ಹಾಗೂ ನಗರಸಭಾ ಸದಸ್ಯೆ ಮಂಜುಳಾ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ನಗರ ಬಿಜೆಪಿ ಖಜಾಂಚಿ ಮುರುಗನ್, ಮಂಜೇಶ್, ದುರ್ಗಾಪರಮೇಶ್ವರಿ ದೇವಾಲಯದ ಅಧ್ಯಕ್ಷ ತಂಗರಾಜ್, ಪ್ರಮುಖರಾದ ಬಡಸಾಬ್, ರಮೇಶ್ ಟಿಪಿ, ಕಣ್ಣ, ವೇಣು, ಗೌರಿ ಗಣೇಶ ಸಮಿತಿಯ ಪದಾಧಿಕಾರಿಗಳು ಮತ್ತು ಪಟಾಣಿ ನಗರದ ನಾಗರಿಕರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.






