ಮಡಿಕೇರಿ ಆ.17 : ಸಾಧಿಕ್ ಆರ್ಟ್ಸ್ ಲಿಂಕ್ಸ್ ವತಿಯಿಂದ ಸ್ಟೂಡೆಂಟ್ ಕಲಾ ಉತ್ಸವ 2023 ಶೀರ್ಷಿಕೆಯಡಿಯಲ್ಲಿ ವಿರಾಜಪೇಟೆಯ ರೋಟರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
6ನೇ ತರಗತಿ ವಿದಾರ್ಥಿ ಜನನಿ ದ್ವಿತೀಯ ಸ್ಥಾನ, 4ನೇ ತರಗತಿ ವಿದ್ಯಾರ್ಥಿ ಗಳಾದ ಲೈಕ ದ್ವಿತೀಯ ಸ್ಥಾನ, ರೆನ ತೃತೀಯ ಸ್ಥಾನಪಡೆದುಕೊಂಡಿದ್ದಾರೆ.
ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಸ್.ಸುದೇಶ್ , ಕಾರ್ಯದರ್ಶಿ ಪಿ.ಎನ್. ವಿನೋದ್, ಸಂಯೋಜಕರಾದ ಭಾಗ್ಯ, ಚೈತ್ರ, ಅಮೃತ, ಶಿಕ್ಷಕ ವೃಂದದವರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








