ಸಂಪಾಜೆ ಆ.17 : ಕಲ್ಲುಗುಂಡಿ ಹಯಾತುಲ್ ಇಸ್ಲಾಂ ಮದ್ರಸಾದಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಕಲ್ಲುಗುಂಡಿ ಜಮಾಅತ್ ಅಧ್ಯಕ್ಷ ಅಬ್ಬಾಸ್ ಸಂಟ್ಯಾರ್ ಧ್ವಜಾರೋಹಣ ನಡೆಸಿ ಶುಭ ಹಾರೈಸಿದರು.
ಸ್ಥಳೀಯ ಖತೀಬ್ ಅಹ್ಮದ್ ನಈಂ ಫೈಝಿ ಸ್ವಾತಂತ್ರ್ಯ ದಿನದ ಸಂದೇಶ ಭಾಷಣ ನಡೆಸಿ, ಭಾರತವು ವಿವಿಧತೆಯಲ್ಲಿ ಏಕತೆಯೆಂಬ ಆಶಯವನ್ನು ಜಗತ್ತಿಗೆ ಸಾಧಿಸಿ ತೋರಿಸಿದ ಶ್ರೇಷ್ಠ ದೇಶವಾಗಿದೆ . ಎಲ್ಲರೂ ಒಂದಾಗಿ ಗಳಿಸಿಕೊಂಡ ದೇಶದ ಸ್ವಾತಂತ್ರ್ಯವನ್ನು ಎಲ್ಲರೂ ಒಂದಾಗಿ ಉಳಿಸಿಕೊಳ್ಳುವ ಪ್ರಯತ್ನವನ್ನು ಇಂದು ಅನಿವಾರ್ಯವಾಗಿ ಮಾಡಬೇಕಿದೆ ಎಂದರು.
ಈ ದೇಶದ ವೈವಿಧ್ಯತೆ ಮತ್ತು ಸಾಮರಸ್ಯದ ಪರಂಪರೆಯನ್ನು ಕಾಪಾಡಲು ನಾವು ಪ್ರತಿಜ್ಞೆಗೆಯ್ಯಬೇಕು ಎಂದು ಕರೆ ನೀಡಿದರು.
ಹಯಾತುಲ್ ಇಸ್ಲಾಂ ಮದ್ರಸಾ ಸದರ್ ಮುಅಲ್ಲಿಂ ಇಬ್ರಾಹಿಂ ಫೈಝಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಂಪಾಜೆ ಗ್ರಾ.ಪಂ ಅಧ್ಯಕ್ಷ ಜಿ.ಕೆ. ಹಮೀದ್ ಶುಭ ಹಾರೈಸಿದರು.
ಮದ್ರಸಾ ಅಧ್ಯಾಪಕ ಸಾಜಿದ್ ಅಝ್ಹರಿ ಪೇರಡ್ಕ ಸ್ವಾತಂತ್ರ್ಯ ದಿನದ ಪ್ರತಿಜ್ಞಾವಿಧಿ ಭೋಧಿಸಿದರು . ಸ್ವಾತಂತ್ರ್ಯೋತ್ಸವದ ಭಾಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು.
ಮದ್ರಸಾ ಅಧ್ಯಾಪಕರಾದ ಇಬ್ರಾಹಿಂ ವಹಬಿ ಪೈಂಬಚ್ಚಾಲ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಕಲ್ಲುಗುಂಡಿ , ಜಮಾಅತ್ ಸಮಿತಿ ಪ್ರಧಾನ ಕಾರ್ಯದರ್ಶಿ ರಝಾಕ್ ಸೂಪರ್ , ಸಿರಾಜುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷ ಎ.ಕೆ.ಇಬ್ರಾಹಿಂ, ಫಾತಿಮಾ ಫಾಳಿಲಾ, ಮಹಿಳಾ ಶರೀಅತ್ ಕಾಲೇಜು ಪ್ರಧಾನ ಕಾರ್ಯದರ್ಶಿ ಎ.ಕೆ.ಹಸೈನಾರ್ , ಜಮಾಅತ್ ಸಮಿತಿ ಪದಾಧಿಕಾರಿಗಳು, ಪೋಷಕರು , ಹಳೆ ವಿದ್ಯಾರ್ಥಿಗಳು ಮತ್ತು ಮದ್ರಸಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.