ನಾಪೋಕ್ಲು ಆ.17 : ನಾಪೋಕ್ಲುವಿನ ವಿವಿಧ ಶಾಲಾ ಕಾಲೇಜು, ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಿಂದ 77ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸ್ವಾತಂತ್ರ್ಯೋತ್ಸ ಅಂಗವಾಗಿ ಅಂಕುರ್ ಪಬ್ಲಿಕ್ ಶಾಲಾ ವತಿಯಿಂದ ಕೊಟ್ಟ ಮುಡಿ ಜಂಕ್ಷನ್‍ನಿಂದ ಏಕತೆಗಾಗಿ ಓಟ ಕಾರ್ಯಕ್ರಮ ನಡೆಯಿತು.
ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಮಾತನಾಡಿ, ಎಲ್ಲಾ ಸಮುದಾಯದವರನ್ನು ಒಗ್ಗೂಡಿಸುವ ವೇದಿಕೆ ಇದಾಗಿದೆ. ಇಂಥ ಓಟ ಕ್ರೀಡಾ ಚಟುವಟಿಕೆಗಳಿಂದಾಗಿ ವಿದ್ಯಾರ್ಥಿಗಳು ಸದೃಢರಾಗಲು ಸಾಧ್ಯ. ಇದು ಒಂದು ಉತ್ತಮ ಕಾರ್ಯಕ್ರಮ ಎಂದರು.
ಸಂಸ್ಥೆಯ ಕಾರ್ಯದರ್ಶಿ ರತ್ನಾ ಚರ್ಮಣ ಮಾತನಾಡಿ, ಮಕ್ಕಳಿಗೆ ಸ್ವಾತಂತ್ರ್ಯದ ಪ್ರೇರಣೆ ನೀಡುವಂತಹ ಕಾರ್ಯಕ್ರಮ ಇದಾಗಿದ್ದು, ಎಲ್ಲರೂ ಭೇದಭಾವ ಇಲ್ಲದೆ ಭಾವೈಕ್ಯತೆಯಿಂದ ಬಾಳುವಂತಹ ಉದ್ದೇಶದಿಂದ ಎರಡನೇ ವರ್ಷದ ಏಕತಾ ಓಟವನ್ನು ಏರ್ಪಡಿಸಲಾಗಿದೆ ಎಂದರು.
ಅಂಕುರ್ ಪಬ್ಲಿಕ್ ಶಾಲೆ, ಶ್ರೀ ರಾಮ ಟ್ರಸ್ಟ್ ,ಕೆಪಿಎಸ್ ಶಾಲೆ ಹಾಗೂ ಮರ್ಕಝ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಏಕತಾ ಓಟದಲ್ಲಿ ಪಾಲ್ಗೊಂಡಿದ್ದರು.
ಬಳಿಕ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕೆಟೋಳಿರ ರಾಜ ಚರ್ಮನ, ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಪಾಂಡ0ಡ ಬೋಪಣ್ಣ ಧ್ವಜಾರೋಹಣ ನೆರವೇರಿಸಿ ವಿಜೇತರಾದಾರರಿಗೆ ಬಹುಮಾನವನ್ನು ನೀಡಿ ದಿನದ ಮಹತ್ವದ ಬಗ್ಗೆ ಮಾತನಾಡಿದರು.
ಈ ಸಂದರ್ಭ ವಿದ್ಯಾ ಸಂಸ್ಥೆಯ ಟ್ರಸ್ಟಿ ಕೇಟೋಳಿರ ಗಾಯನ್ ಗೌರಮ್ಮ. ವಿವಿಧ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ, ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ