ಮಡಿಕೇರಿ ಆ.18 : ಮಡಿಕೇರಿ ವಿಭಾಗದ ಸೋಮವಾರಪೇಟೆ ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಗರ್ವಾಲೆ, ಸೂರ್ಲಬ್ಬಿ, ಮಂಕ್ಯ ಗ್ರಾಮಗಳ ರೈತರ ಜಮೀನಿನಲ್ಲಿ ಬೀಡುಬಿಟ್ಟು ಬೆಳೆ ನಷ್ಟ ಮಾಡುತ್ತಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಕೃಷಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಾ ಬೆಳೆನಷ್ಟದೊಂದಿಗೆ ಸಾರ್ವಜನಿಕರಲ್ಲಿ ಜೀವ ಭಯ ತಂದೊಡ್ಡಿರುವ ಮರಿಯಾನೆಯನ್ನು ಒಳಗೊಂಡಂತೆ ಇರುವ ಒಟ್ಟು 4 ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆಯನ್ನು ಆ.19 ಮತ್ತು 20 ರಂದು ಕೈಗೊಳ್ಳಲಾಗುತ್ತಿದೆ.
ಸೂರ್ಲಬ್ಬಿ, ಮಂಕ್ಯ, ತಾಕೇರಿ, ಕಿರಂಗದೂರು, ಕಾಜೂರು ಮಾರ್ಗವಾಗಿ ಕ್ರಮಕೈಗೊಳ್ಳುವುದರಿಂದ ಮೇಲ್ಕಂಡ ಗ್ರಾಮಗಳೂ ಸೇರಿದಂತೆ ತಾಕೇರಿ, ಕಿರಗಂದೂರು, ಕಾಜೂರು ಮತ್ತು ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಹಾಗೂ ತೋಟದ ಮತ್ತು ಜಮೀನಿನ ಕೆಲಸಗಳನ್ನು ನಿಲ್ಲಿಸುವಂತೆ ಅರಣ್ಯ ಇಲಾಖೆ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ.
ಕಾಡಾನೆ ಓಡಿಸುವ ಸಮಯದಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೋಮವಾರಪೇಟೆ ವಲಯದ ವಲಯ ಅರಣ್ಯಾಧಿಕಾರಿ ಹೆಚ್.ಪಿ.ಚೇತನ್ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
Breaking News
- *ಗೋಣಿಕೊಪ್ಪ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಉದ್ಘಾಟನೆ*
- *ಸೋಮವಾರಪೇಟೆ : ಒತ್ತುವರಿ ಜಮೀನುಗಳಿಗೆ ಹಕ್ಕುಪತ್ರ ನೀಡಲು ಆಗ್ರಹ*
- *ಅರೆ ಸೇನಾಪಡೆಯ ನಿವೃತ್ತ ಯೋಧರ ಸಮಸ್ಯೆಗಳಿಗೆ ಸ್ಪಂದನೆ ಅಗತ್ಯ : ಮಹಾಸಭೆಯಲ್ಲಿ ಒತ್ತಾಯ*
- *ಹೂಕಾಡು ಅಂಗನವಾಡಿಯಲ್ಲಿ ಬಾಲಮೇಳ*
- *ಡಿ.3 ರಂದು ವಿಶ್ವ ವಿಶೇಷಚೇತನರ ದಿನಾಚರಣೆ*
- *ಡಿ.2 ರಂದು ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ*
- *ಪತ್ರಿಕೋದ್ಯಮ ಪದವೀಧರರಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ*
- *ಸಿದ್ದಾಪುರ : ಡಿ.23 ರಂದು ಅಂಚೆ ಅದಾಲತ್ ಸಭೆ*
- *ಜ.5 ರಂದು ಪತ್ರಕರ್ತರ ಕ್ರಿಕೆಟ್ ಕಲರವ : ಆಟಗಾರರ ಪಟ್ಟಿ ಬಿಡುಗಡೆ*
- *ಮಡಿಕೇರಿಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಸಂವಿಧಾನ ದಿನಾಚರಣೆ : ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ : ಸಿವಿಲ್ ನ್ಯಾಯಾಧೀಶೆ ಶುಭ*