ಸೋಮವಾರಪೇಟೆ ಆ.18 : ಮಡಿಕೇರಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶುಕೃತ ಇಂದೂಧರ್ ಮಿಸ್ಸಸ್ ಇಂಡಿಯಾ ಕರ್ನಾಟಕ 2023 ಕ್ವೀನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಅಲ್ಲದೆ ಮಿಸ್ಸೆಸ್ ಕೊಡಗು, ಮಿಸ್ಸೆಸ್ ಇಂಡಿಯಾ ಕರ್ನಾಟಕ ರೀಮಾರ್ಕ್‍ಯಬಲ್ ಕ್ವೀನ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ.
ಬೆಂಗಳೂರಿನ ಕೋಣನಕುಂಟೆ ಶ್ರೀಹರಿ ಖೋಡೆ ಆಡಿಟೋರಿಯಮ್ ನಲ್ಲಿ ನಡೆದ ಪ್ರತಿಭಾಸೌಶಿಮಠ್ ಆಹ್ವಾನಿತ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದರು. ಸ್ಪರ್ಧೆಯಲ್ಲಿ 35 ಮಂದಿ ಭಾಗವಹಿಸಿದ್ದರು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 1993 ಮಿಸ್‍ಇಂಡಿಯಾ ರೇಖಾ ಹಂಡೆ, 2018 ಮಿಸ್ ಇಂಡಿಯಾ ಉಜಾಲ ಸಾಬರವಲ್, ಕಲಾವಿಧರಾದ ಸಿಲ್ಲಿಲಲ್ಲಿ ಖ್ಯಾತಿಯ ಸುನೇತ್ರ ಪಂಡಿತ್, ಪೋಷಕ ನಟ ಮೂಗು ಸುರೇಶ್, ಆಯೋಜಕರಾದ ಪ್ರತಿಭಾ ಸೌಶಿಮಠ್ ಇದ್ದರು.
ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್ ಅವರ ಪತ್ನಿಯಾಗಿದ್ದು, ಕುಶಾಲನಗರದಲ್ಲಿ ವಾಸವಾಗಿದ್ದಾರೆ.








