ಮಡಿಕೇರಿ ಆ.19 : ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಗಣ್ಯರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆದವು.
ಕೊಡಗು ಪತ್ರಕರ್ತರ ಸಂಘದಿಂದ ಮಡಿಖೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ , ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರಾದ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ.ಅನಂತ ಶಯನ, ಪತ್ರಿಕಾ ಛಾಯಾಗ್ರಹಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿರುವ ವಿಶ್ವ ಕುಮಾರ್ ಗುಡ್ಡೆಮನೆ, ಪೊನ್ನಂಪೇಟೆ ಶೈಲೇಂದ್ರ ಮತ್ತು ಎಸ್.ಆರ್.ವಸಂತ್ ಅವರುಗಳನ್ನು ಹಾಗೂ ಛಾಯಾಗ್ರಾಹಕರ ಸಂಘದಿಂದ ಹಿರಿಯ ಛಾಯಾಗ್ರಾಹಕರಾದ ಸುರೇಶ್ ಮಾವಡ್ಕರ್ ಮತ್ತು ನಾಗೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹ್ಯಾಪಿ ಟೀತ್ ಪ್ರಶಸ್ತಿ-ಸಂಘದ ಗೌರವ ಸಲಹೆಗಾರರಾದ ಬಿ.ಜಿ.ಅನಂತ ಶಯನ ಅವರು ತಮ್ಮ ಪುತ್ರಿ ಡಾ. ಅನುಶ್ರೀ ಅವರ ಹ್ಯಾಪಿ ಟೀತ್ ಕ್ಲಿನಿಕ್ ಹೆಸರಲ್ಲಿ ಸ್ಥಾಪಿಸಿರುವ ಮಾನವೀಯ ಮೌಲ್ಯಗಳ ಕುರಿತಾದ ಅತ್ಯುತ್ತಮ ಫೋಟೋ ಗ್ರಫಿ ಸ್ಪರ್ಧೆಯ ಪ್ರಶಸ್ತಿಯನ್ನು ಅನಿಲ್ ಎಚ್.ಟಿ. ಅವರಿಗೆ ನೀಡಿ ಗೌರವಿಸಲಾಯಿತು.
ಸಂಘದಿಂದ ಕೊಡಮಾಡುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯುತ್ತಮ ಫೋಟೋಗ್ರಫಿ ಸ್ಪರ್ಧೆಯಲ್ಲಿ ಸಂಯುಕ್ತ ಕರ್ನಾಟಕದ ಮೂರ್ನಾಡು ವರದಿಗಾರ ಟಿ.ಸಿ.ನಾಗರಾಜ್ ಅವರ ಛಾಯಾಚಿತ್ರಕ್ಕೆ ಪ್ರಥಮ, ವಿಶ್ವವಾಣಿ ಜಿಲ್ಲಾ ವರದಿಗಾರ ಅನಿಲ್ ಹೆಚ್.ಟಿ. ಅವರ ಛಾಯಾಚಿತ್ರಕ್ಕೆ ದ್ವಿತೀಯ ಬಹುಮಾನ ಹಾಗೂ ವಿಡಿಯೋಗ್ರಾಫಿಯಲ್ಲಿ ಪ್ರಜಾಟಿವಿ ಕ್ಯಾಮರಾಮೆನ್ ವಿಜಯ್ ಕಾಟಕೇರಿಗೆ ಪ್ರಥಮ ಹಾಗೂ ಮೈಸೂರು ಮಿತ್ರ ಜಿಲ್ಲಾ ವರದಿಗಾರ ಪ್ರಸಾದ್ ಸಂಪಿಗೆಕಟ್ಟೆ ‘ಅವರ ಕೋಟೆ ಅಬ್ಬಿ ವೈಭವ’ ದ್ವಿತೀಯ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಛಾಯಾಗ್ರಾಹಕರಾದ ರವೀಂದ್ರ ರೈ ಅವರ ಪುತ್ರಿ ಸೃಷ್ಟಿ ರೈ ಅವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಪ್ರೋತ್ಸಾಹಿಸಲಾಯಿತು.