ಮಡಿಕೇರಿ ಆ.19 : ಪಶುಪಾಲನೆ ಇಲಾಖೆಯ ಅಸಂಘಟಿತ ವಲಯದಲ್ಲಿನ ಹಂದಿ, ಕುರಿ, ಮೇಕೆ ಸಾಕಾಣಿಕೆಯನ್ನು ಸಂಘಟಿತ ವಲಯಕ್ಕೆ ಕರೆದೊಯ್ಯಲು ಹಾಗೂ ಪ್ರಗತಿಪರ ರೈತರನ್ನು ಉದ್ಯಮೆದಾರರನ್ನಾಗಿ ಪರಿವರ್ತಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರದ ಆತ್ಮ ನಿರ್ಭರ ಅಭಿಯಾನ ಯೋಜನೆಯಡಿಯಲ್ಲಿ ಕೆಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಮೂಲಕ ಜಾನುವಾರು ಉತ್ಪನ್ನ ಒದಗಿಸುವುದು, ಯುವಜನತೆಗೆ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸಲು ಪ್ರೋತ್ಸಾಹ ನೀಡುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಲು www.udyamimitra.com ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ(ಎನ್‍ಎಲ್‍ಎಂ-ಇಡಿ) ದಡಿ ಹಂದಿ ಘಟಕ(50 ಹೆಣ್ಣು, 5 ಗಂಡು) ಕ್ಕೆ ರೂ.30 ಲಕ್ಷ, ಸಹಾಯಧನ ರೂ.15 ಲಕ್ಷ(ಶೇ.50), ಹಂದಿ ಘಟಕ(100 ಹೆಣ್ಣು, 10 ಗಂಡು) ರೂ.60 ಲಕ್ಷ, ಸಹಾಯಧನ ರೂ.30 ಲಕ್ಷ, ಕುರಿ-ಮೇಕೆ ಘಟಕ(100 ಹೆಣ್ಣು, 5 ಗಂಡು)ಕ್ಕೆ ರೂ.20 ಲಕ್ಷ, ಸಹಾಯಧನ ರೂ.10 ಲಕ್ಷ ಆಗಿರುತ್ತದೆ.
ಪ್ರಧಾನ ಮಂತ್ರಿಗಳ ಅತೀ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ(ಪಿಎಂ-ಎಫ್‍ಎಂಇ) ಈ ಯೋಜನೆಯಡಿಯಲ್ಲಿ ಹೊಸ ಉದ್ದಿಮೆ ಸ್ಥಾಪಿಸಲು/ ಹಾಲಿ ಇರುವ ಆಹಾರ ಸಂಸ್ಕರಣಾ ಘಟಕ ಉನ್ನತೀಕರಿಸಲು ಅವಕಾಶವಿದ್ದು, ಯೋಜನಾ ವೆಚ್ಚದ ಶೇ.35 ಕೇಂದ್ರ ಸರ್ಕಾರ ಮತ್ತು ಶೇ.15 ರಷ್ಟು ರಾಜ್ಯ ಸರ್ಕಾರದ ಸಹಾಯಧನ ನೀಡಲಾಗುವುದು.(ಗರಿಷ್ಟ ಸಹಾಯಧನದ ಮಿತಿ ರೂ.15 ಲಕ್ಷ).
ಅರ್ಜಿದಾರರು ಯೋಜನಾ ವರದಿ, ಭೂ ದಾಖಲೆ, ಘಟಕ ಸ್ಥಳದ ಜಿಪಿಎಸ್ ಭಾವಚಿತ್ರ, ಕಳೆದ 6 ತಿಂಗಳ ಬ್ಯಾಂಕ್ ವಹಿವಾಟು ವಿವರ, ವಿದ್ಯಾರ್ಹತೆ, ತರಬೇತಿ, ಅನುಭವ ಹೊಂದಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಶುಪಾಲಕರಿಗೆ ಆರ್ಥಿಕ ನೆರವು : ಹೈನುಗಾರಿಕೆ, ಹಂದಿ, ಕುರಿ, ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡ ರೈತರಿಗೆ ಅಲ್ಪಾವಧಿಯ ದುಡಿಯುವ ಬಂಡವಾಳ(ವರ್ಕಿಂಗ್ ಕ್ಯಾಪಿಟಲ್) ನೀಡುವ ಉದ್ದೇಶ. ಅಗತ್ಯತೆಗೆ ತಕ್ಕಂತೆ ಬ್ಯಾಂಕ್‍ಗಳಿಂದ ಶೇ.2 ಬಡ್ಡಿ ದರದಲ್ಲಿ ಆರ್ಥಿಕ ನೆರವು ನೀಡಲಾಗುವುದು.
ವಿವಿಧ ಚಟುವಟಿಕೆಗಳಿಗೆ ನಿಗಧಿಪಡಿಸಿದ ದುಡಿಯುವ ಬಂಡವಾಳ : ಮಿಶ್ರತಳಿ ಹಸು ಘಟಕ(2ಕ್ಕೆ ಸೀಮಿತ) ರೂ.36 ಸಾವಿರ, ಸುಧಾರಿತ ತಳಿ ಎಮ್ಮೆ ಘಟಕ(2 ಕ್ಕೆ ಸೀಮಿತ) ರೂ.42 ಸಾವಿರ, ಹಂದಿ(10 ಹಂದಿ) ರೂ.60 ಸಾವಿರ ಹಾಗೂ ಕುರಿ-ಮೇಕೆ ಘಟಕ(10+1) ರೂ.14,700 ಆಗಿದೆ.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ, ಮಡಿಕೇರಿ 9448647276 ಮತ್ತು ವಿಸ್ತರಣಾ ಅಧಿಕಾರಿ ಪಶು ಆಸ್ಪತ್ರೆ, ಮಡಿಕೇರಿ 9449083876 ನ್ನು ಸಂಪರ್ಕಿಸಬಹುದು ಎಂದು ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Breaking News
- *ನ.30 ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಮತ್ತು ಟಿ.ಪಿ.ರಮೇಶ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ*
- *ಇಂಡಿಯನ್ ಫಿಲ್ಟರ್ ಕಾಫಿ ಚಾಂಪಿಯನ್ಶಿಪ್ : ಶಶಾಂಕ್ ರಾಜ್ಯಮಟ್ಟಕ್ಕೆ ಆಯ್ಕೆ*
- *ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಮತ್ತು ಗೀತ ಗಾಯನ ಕಾರ್ಯಕ್ರಮ : ಮಕ್ಕಳಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಿ : ಎಂ.ಪಿ.ಕೇಶವ ಕಾಮತ್*
- *ನ.26ರಂದು ಸಿಎನ್ಸಿಯಿಂದ ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ಶಿಶು ಸಾಹಿತ್ಯದ ಪಿತಾಮಹ ಪಂಜೆ ಮಂಗೇಶರಾಯರು*
- *ಸುಂಟಿಕೊಪ್ಪದಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ*
- *ಹೆಗ್ಗಳ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಮಹಾಪೂಜೆ*
- *ಕೂತಿನಾಡು : ದೇವಾಲಯದ ಜೀರ್ಣೋದ್ಧಾರಕ್ಕೆ ಆರೋಡ ತಾಂಬೂಲ ಪ್ರಶ್ನೆ*
- *ಮಡಿಕೇರಿ : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ*
- ಕುಶಾಲನಗರ ಕನ್ನಡ ಭಾರತಿ ಕಾಲೇಜಿನಲ್ಲಿ ಅಕ್ಷರ ಜ್ಯೋತಿ ಯಾತ್ರೆ ಕುರಿತು ಉಪನ್ಯಾಸ : ವಿದ್ಯಾರ್ಥಿಗಳಲ್ಲಿ ಉತ್ತರ ಪ್ರೇರಣೆ, ಸ್ಫೂರ್ತಿ ಬೆಳೆಸಬೇಕು : ಬಸವಕುಮಾರ್ ಪಾಟೀಲ್*