Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿಶ್ವ ಪುಸ್ತಕ ದಿನ : ಹೊತ್ತಿಗೆಯ ಜ್ಞಾನ ಬೇಕು ಹೊತ್ತು ಹೊತ್ತಿಗೆ : ಬರಹ : ಗೀತಾಂಜಲಿ ಎನ್.ಎಮ್ ಸೋಮವಾರಪೇಟೆ*
  • *ಕೊಡಗು ಜಿಲ್ಲೆಯ 102 ಗ್ರಾ.ಪಂ ಗಳಲ್ಲಿ 1200 ಸದಸ್ಯ ಸ್ಥಾನ ನಿಗದಿ :  ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಲು ಅವಕಾಶ*
  • *ಕೊಡಗು : ವಿದೇಶಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ : ಸಮಗ್ರ ತನಿಖೆಗೆ ಸಚಿವ ಭೋಸರಾಜು ಸೂಚನೆ*
  • *ವಿರಾಜಪೇಟೆ : ಏ.26 ರಂದು ಗ್ರಾಮೀಣ ಕ್ರೀಡಾಕೂಟ*
  • *ವಿದ್ಯುತ್ ಕಂಬಕ್ಕೆ ಆಟೋ ಡಿಕ್ಕಿ : ಚಾಲಕ ಸಾವು*
  • *ಸೋಮವಾರಪೇಟೆಯಲ್ಲಿ ಕುಂದುಕೊರತೆ ಸಭೆ : ಪರಿಶಿಷ್ಟರು ಸೇರಿದಂತೆ ಎಲ್ಲಾ ಜನರ ಶ್ರೇಯೋಭಿವೃದ್ಧಿಗೆ ಅಧಿಕಾರಿಗಳು ಇಚ್ಚಾಶಕ್ತಿಯಿಂದ ಕರ್ತವ್ಯ ನಿರ್ವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಸೋಮವಾರಪೇಟೆ : ಬಸವೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಿಶೇಷ ಪೂಜೆ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.23 ರಂದು ನಡೆಯುವ ಪಂದ್ಯಗಳು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.22 ರಂದು ಗೆಲುವು ಸಾಧಿಸಿದ ತಂಡಗಳು*
  • *ರಾಜ್ಯ ಮಟ್ಟದ ಮೊಗೇರ ಕ್ರೀಡಾಕೂಟಕ್ಕೆ ಮಡಿಕೇರಿಯಲ್ಲಿ ಸಂಭ್ರಮದ ತೆರೆ : ಮೊಗೇರ ಸಮಾಜಕ್ಕೆ ಸಮುದಾಯ ಭವನ : ಶಾಸಕ ಎ.ಎಸ್.ಪೊನ್ನಣ್ಣ ಭರವಸೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿಯಲ್ಲಿ ರಂಜಿಸಿದ ಮುಳಿಯ ಗಾನರಥ ಸಂಗೀತ ಸ್ಪಧೆ೯: ಸಂಗೀತಕ್ಕೆ ಭಾವನಾತ್ಮಕವಾಗಿ ಒಗ್ಗೂಡಿಸುವ ಶಕ್ತಿಯಿದೆ – ಅನಿಲ್ ಎಚ್.ಟಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿಯಲ್ಲಿ ರಂಜಿಸಿದ ಮುಳಿಯ ಗಾನರಥ ಸಂಗೀತ ಸ್ಪಧೆ೯: ಸಂಗೀತಕ್ಕೆ ಭಾವನಾತ್ಮಕವಾಗಿ ಒಗ್ಗೂಡಿಸುವ ಶಕ್ತಿಯಿದೆ – ಅನಿಲ್ ಎಚ್.ಟಿ*

ಆಗಷ್ಟ್ 20, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.20 : ಮಾನಸಿಕ ಒತ್ತಡ ಕಡಮೆಮಾಡಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಶಕ್ತಿ ಸಂಗೀತಕ್ಕಿದ್ದು, ಭಾವನಾತ್ಮಕವಾಗಿ ಒಗ್ಗೂಡಿಸುವ ಅದ್ಪುತ ಕಲೆಯಾಗಿಯೂ ಸಂಗೀತವಾಗಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಹೇಳಿದ್ದಾರೆ.
ನಗರದ ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿಯ ಶತಮಾನೋತ್ಸವ ಸಭಾಂಗಣದಲ್ಲಿ ಮುಳಿಯ ಜ್ಯುವೆಲ್ಲರ್ಸ್  ಸಂಸ್ಥೆಯ ವತಿಯಿಂದ ಆಯೋಜಿತ ಗಾನರಥ ಸಂಗೀತ ಸ್ಪಧೆ೯ಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅನಿಲ್, ಮನಸ್ಸನ್ನು ಉಲ್ಲಾಸಗೊಳಿಸುವ , ಜಗತ್ತನ್ನು ಲವಲವಿಕೆಯಿಂದ ಇರಿಸುವ ಅಪೂವ೯ ಶಕ್ತಿ ಸಂಗೀತಕ್ಕಿದೆ. ಅನೇಕ ಕಾಯಿಲೆಗಳ ನಿವಾರಣೆಗೂ ಸಂಗೀತ  ಮದ್ದಾಗಿದೆ. ಮ್ಯೂಸಿಕ್ ತೆರಪಿ ಜಗತ್ತಿನಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ಜನಪ್ರಿಯವಾಗುತ್ತಿದೆ. ಮನರಂಜನೆಯ ಪ್ರಮುಖ ಅಂಶವಾಗಿರುವ ಸಂಗೀತ ಕಲೆ, ನಮ್ಮ ಸಂಸ್ಕೖತಿಯ ಪ್ರತಿಬಿಂಬವಾಗಿ ಕೂಡ ಗುರುತಿಸಲ್ಪಟ್ಟಿದೆ ಎಂದು ಸಂಗೀತ ಕ್ಷೇತ್ರದ ಹಿರಿಮೆಯನ್ನು ವಣಿ೯ಸಿದರು.
ಮುಳಿಯ ಸಂಸ್ಥೆಯ ವಹಿವಾಟು ಚಿನ್ನಾಭರಣಗಳ ಮಾರಾಟವಾಗಿದ್ದರೂ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಸಾಂಸ್ಕೖತಿಕ ರಾಯಭಾರಿಗಳಂತೆ ಗಾನರಥ ಕಾಯ೯ಕ್ರಮದ ಮೂಲಕ ದಕ್ಷಿಣಕನ್ನಡ, ಕೊಡಗು ಜಿಲ್ಲೆಗಳ ಅನೇಕ ಯುವ ಕಲಾವಿದರನ್ನು ಬೆಳಕಿಗೆ ತರುವ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದ ಅನಿಲ್, ವಾಣಿಜ್ಯ ಲೋಕದಾಚೆಗೆ ಸಾಂಸ್ಕೖತಿಕವಾಗಿಯೂ ಜನಮನ ಬೆಸೆಯುವ ಕಾಯ೯ಕ್ರಮ ಗಾನರಥವಾಗಿದೆ ಎಂದು ಹಷ೯ ವ್ಯಕ್ತಪಡಿಸಿದರು.
ಗಾನರಥದ ಮೂಲಕ ಕೊಡಗಿನ ವಿವಿದೆಡೆಗಳ ಹಲವಾರು ಹಾಡುಗಾರರಿಗೆ ಪ್ರೋತ್ಸಾಹ ದೊರಕಿರುವುದು ಹೆಮ್ಮೆ ತರುವ ವಿಚಾರ, ಓವ೯ ಕೂಲಿಕಾಮಿ೯ಕನೂ ಗಾನರಥದ ವೇದಿಕೆಯಲ್ಲಿ ತನ್ನಲ್ಲಿರುವ ಸಂಗೀತದ  ಅದ್ಬುತ ಪ್ರತಿಭೆ ಪ್ರದಶಿ೯ಸುತ್ತಾನೆ ಎಂಬುದು ಗಾನರಥದ ಸಫಲತೆಗೆ ಸಾಕ್ಷಿಯಾಗಿದೆ ಎಂದೂ ಅನಿಲ್ ಎಚ್.ಟಿ. ಬಣ್ಣಿಸಿದರು.
ಗಾನರಥ ಕಾಯ೯ಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ, ಕಲಾವಿದೆ ಮೊಣ್ಣಂಡ ಶೋಭಾಸುಬ್ಬಯ್ಯ,  ಅನೇಕ ವಷ೯ಗಳಿಂದ ಮುಳಿಯ ಸಂಸ್ಥೆಯವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆ ಪ್ಲಾಸ್ಟಿಕ್ ಮುಕ್ತವಾಗುವ ನಿಟ್ಟಿನಲ್ಲಿಯೂ ಮುಳಿಯ ಸಂಸ್ಥೆಯವರು ವಿನೂತನವಾದ ಕಾಯ೯ಯೋಜನೆ ಹಮ್ಮಿಕೊಳ್ಳಲಿ ಎಂದು ಆಶಿಸಿದರು.
ಮುಳಿಯ ಸಂಸ್ಥೆಯ  ಅಧ್ಯಕ್ಷರಾದ  ಕೇಶವಪ್ರಸಾದ್ ಮುಳಿಯ ಮಾತನಾಡಿ,  ಬೆಳ್ತಂಗಡಿಯಿಂದ ಪ್ರಾರಂಭವಾದ ಗಾನರಥ ಎಂಬ ಸಾಂಸ್ಕೖತಿಕ ತೇರು ಕೊಡಗಿನಲ್ಲಿಯೂ ಎರಡನೇ ವಷ೯ಕ್ಕೆ ಕಾಲಿರಿಸಿದೆ. ಗಾನರಥದ ಮೂಲಕ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ನೂರಾರು ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿದ ಹೆಮ್ಮೆ ನಮ್ಮದಾಗಿದೆ. ಮುಂದಿನ ವಷ೯ಗಳಲ್ಲಿಯೂ ಜಿಲ್ಲೆಗಳ ತಾಲೂಕು ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ಕೈಗೊಂಡು ಗಾನರಥದ ಮೂಲಕ ಮತ್ತಷ್ಟು ಗಾಯಕರನ್ನು ಬೆಳಕಿಗೆ ತರಲಾಗುತ್ತದೆ ಎಂದು ಹೇಳಿದರು.
ಮುಳಿಯ ಸಂಸ್ಥೆಯು 16 ವಷ೯ಗಳಿಂದ ಕೊಡಗು ಜಿಲ್ಲೆಯ ಮಡಿಕೇರಿ, ಗೋಣಿಕೊಪ್ಪಲುವಿನಲ್ಲಿ ಕಾಯ೯ನಿವ೯ಹಿಸುತ್ತಿದ್ದು ವಿವಿಧ ಯೋಜನೆಗಳ ಮೂಲಕ ಸಂಸ್ಥೆಯು ಸಾಮಾಜಿಕ ಚಟುವಟಿಕೆಗಳಲ್ಲಿಯೂ ಜನತೆಗೆ ಕೊಡುಗೆ ನೀಡುತ್ತಾ ಬಂದಿದೆ ಎಂದೂ ಕೇಶವಪ್ರಸಾದ್ ಹೇಳಿದರು.
ಮುಳಿಯ ಸಂಸ್ಥೆಯ  ಗೌರವ ಸಲಹೆಗಾರ ವೇಣುಶಮ೯,  ಶಾಖಾ ಪ್ರಬಂಧಕರಾದ ತೀತಿಮಾಡ ಸೋಮಣ್ಣ, ಬಿ.ಎಸ್. ಕಿಶೋರ್, ಸಂಜೀವ ಹಾಜರಿದ್ದರು. ಬಾಳೆಯಡ ದಿವ್ಯ  ಮಂದಪ್ಪ ಕಾಯ೯ಕ್ರಮ ನಿರೂಪಿಸಿದರು.ಇದೇ ಸಂದಭ೯ ಗಾನರಥ ಕಾಯ೯ಕ್ರಮದ ಮೂಲಕ ಸಾಂಸ್ಕೖತಿಕ ಕ್ಷೇತ್ಪಕ್ಕೆ ಪ್ರೋತ್ಸಾಹ ನೀಡುತ್ತಿರುವ ಮುಳಿಯ ಸಂಸ್ಥೆಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರನ್ನು ಮಡಿಕೇರಿ ತಾಲೂಕು ಜಾನಪದ ಪರಿಷತ್ ಪರವಾಗಿ ಅಧ್ಯಕ್ಷರಾದ ಅನಿಲ್ ಎಚ್.ಟಿ, ನಿದೇ೯ಶರಾದ ಕೆ.ಜಯಲಕ್ಷ್ಮಿ, ಪ್ರತಿಮಾ ರೈ, ರೀನಾ ಅನಿಲ್ ಸನ್ಮಾನಿಸಿದರು.
ಜಿಲ್ಲೆಯ ವಿವಿಧೆಡೆಗಳಿಂದ ಕಲಾವಿದರು ಗಾನರಥದಲ್ಲಿ ಪಾಲ್ಗೊಂಡಿದ್ದರು.
ವಿವಿಧ ಹಂತಗಳಲ್ಲಿ ನಡೆದ ಗಾನರಥ ಸ್ಪಧೆ೯ಯಲ್ಲಿ   ವಿಜೇತರಾದವರ ವಿವರ.
ಹಿರಿಯರ ವಿಭಾಗ – ದಿವಿಜೇಶ್ (ಪ್ರಥಮ), ಮಂಜುನಾಥ್ (ದ್ವಿತೀಯ), ಕಿರಣ್ ಕುಮಾರ್ (ತೖತೀಯ)
ಕಿರಿಯರ ವಿಭಾಗ – ಸಿಂಚನಗೌಡ (ಪ್ರಥಮ), ಶ್ರಾವ್ಯ (ದ್ವಿತೀಯ),ವನಿತಾ (ತೖತೀಯ)
ಗಾನರಥ ಸಂಗೀತ ಸ್ಪಧೆ೯ಯ ತೀಪು೯ಗಾರರಾಗಿ ನಾಪೋಕ್ಲುವಿನ ಸರಸ್ವತಿ ಮನೋಹರಿ ಮತ್ತು ಬಾಳೆಲೆಯ ಚಂದ್ರಕಲಾ ಕಾಯ೯ನಿವ೯ಹಿಸಿದ್ದರು. 52 ಸ್ಪಧಿ೯ಗಳು ಗಾನರಥದ ಸೆಮಿಫೈನಲ್ ನಲ್ಲಿ ಪಾಲ್ಗೊಂಡು ಫೈನಲ್ ನಲ್ಲಿ 6 ಮಂದಿ ಎರಡು ವಿಭಾಗಗಳಲ್ಲಿ ಗಾನರಥದ ವಿಜೇತರಾಗಿ ಆಯ್ಕೆಗೊಂಡರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿಶ್ವ ಪುಸ್ತಕ ದಿನ : ಹೊತ್ತಿಗೆಯ ಜ್ಞಾನ ಬೇಕು ಹೊತ್ತು ಹೊತ್ತಿಗೆ : ಬರಹ : ಗೀತಾಂಜಲಿ ಎನ್.ಎಮ್ ಸೋಮವಾರಪೇಟೆ*

ಏಪ್ರಿಲ್ 23, 2026

*ಕೊಡಗು ಜಿಲ್ಲೆಯ 102 ಗ್ರಾ.ಪಂ ಗಳಲ್ಲಿ 1200 ಸದಸ್ಯ ಸ್ಥಾನ ನಿಗದಿ :  ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಲು ಅವಕಾಶ*

ಏಪ್ರಿಲ್ 22, 2026

*ಕೊಡಗು : ವಿದೇಶಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ : ಸಮಗ್ರ ತನಿಖೆಗೆ ಸಚಿವ ಭೋಸರಾಜು ಸೂಚನೆ*

ಏಪ್ರಿಲ್ 22, 2026

*ಕೊಡಗು ಜಿಲ್ಲೆಯ 102 ಗ್ರಾ.ಪಂ ಗಳಲ್ಲಿ 1200 ಸದಸ್ಯ ಸ್ಥಾನ ನಿಗದಿ :  ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಲು ಅವಕಾಶ*

ಏಪ್ರಿಲ್ 22, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.22 NEWS DESK : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ…

*ಕೊಡಗು : ವಿದೇಶಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ : ಸಮಗ್ರ ತನಿಖೆಗೆ ಸಚಿವ ಭೋಸರಾಜು ಸೂಚನೆ*

ಏಪ್ರಿಲ್ 22, 2026

*ವಿರಾಜಪೇಟೆ : ಏ.26 ರಂದು ಗ್ರಾಮೀಣ ಕ್ರೀಡಾಕೂಟ*

ಏಪ್ರಿಲ್ 22, 2026

*ವಿದ್ಯುತ್ ಕಂಬಕ್ಕೆ ಆಟೋ ಡಿಕ್ಕಿ : ಚಾಲಕ ಸಾವು*

ಏಪ್ರಿಲ್ 22, 2026

*ಸೋಮವಾರಪೇಟೆಯಲ್ಲಿ ಕುಂದುಕೊರತೆ ಸಭೆ : ಪರಿಶಿಷ್ಟರು ಸೇರಿದಂತೆ ಎಲ್ಲಾ ಜನರ ಶ್ರೇಯೋಭಿವೃದ್ಧಿಗೆ ಅಧಿಕಾರಿಗಳು ಇಚ್ಚಾಶಕ್ತಿಯಿಂದ ಕರ್ತವ್ಯ ನಿರ್ವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಏಪ್ರಿಲ್ 22, 2026

*ಸೋಮವಾರಪೇಟೆ : ಬಸವೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಿಶೇಷ ಪೂಜೆ*

ಏಪ್ರಿಲ್ 22, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.23 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 22, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.22 ರಂದು ಗೆಲುವು ಸಾಧಿಸಿದ ತಂಡಗಳು*

ಏಪ್ರಿಲ್ 22, 2026

*ರಾಜ್ಯ ಮಟ್ಟದ ಮೊಗೇರ ಕ್ರೀಡಾಕೂಟಕ್ಕೆ ಮಡಿಕೇರಿಯಲ್ಲಿ ಸಂಭ್ರಮದ ತೆರೆ : ಮೊಗೇರ ಸಮಾಜಕ್ಕೆ ಸಮುದಾಯ ಭವನ : ಶಾಸಕ ಎ.ಎಸ್.ಪೊನ್ನಣ್ಣ ಭರವಸೆ*

ಏಪ್ರಿಲ್ 22, 2026

*ಮೇ 1 ರಂದು ಶ್ರೀ ಯೋಗಿ ನಾರಾಯಣ ಕೊಡಗು ಜಿಲ್ಲಾ ಬಲಿಜ ಸಮಾಜದ ವಾರ್ಷಿಕ ಮಹಾಸಭೆ*

ಏಪ್ರಿಲ್ 22, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.