ಕುಶಾಲನಗರ, ಆ.20: ಕೂಡಿಗೆ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸುಮಾರು 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಜುಲೈ ಅಂತ್ಯಕ್ಕೆ ನಿವೃತ್ತಿ ಹೊಂದಿದ ಸಿ.ಎಂ ಸುಲೋಚನಾ ಅವರಿಗೆ ಶಾಲೆಯ ಆಡಳಿತ ಮಂಡಳಿ ವತಿಯಿಂದ, ಶಿಕ್ಷಕ ವೃಂದ ಹಾಗೂ ಶಿಕ್ಷಕರ ಸಂಘಟನೆಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಮಾತನಾಡಿ, 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾದ ಶಿಕ್ಷಕಿ ಸುಲೋಚನ ಅವರು ಮಕ್ಕಳ ಕ್ರೀಡೆಗೆ ನೋಡುತ್ತಿದ್ದ ಪ್ರೋತ್ಸಾಹ ಅನುಕರಣೀಯವಾದುದು. ಶಿಕ್ಷಕಿಯವರ ಅಪಾರ ವಿದ್ಯಾರ್ಥಿ ವೃಂದವು ಅವರನ್ನು ಬೀಳ್ಕೊಡುತ್ತಿರುವುದು ಅವರು ಮಕ್ಕಳ ಮೇಲೆ ಇಟ್ಟಿರುವ ಪ್ರೀತಿಯ ದ್ಯೋತಕವಾಗಿದೆ ಎಂದರು.
ಸನ್ಮಾನಿತರಾದ ಶಿಕ್ಷಕಿ ಸುಲೋಚನ ಮಾತನಾಡಿ, ಶಾಲೆಯಲ್ಲಿ ತಾವು ಎಲ್ಲರ ಸಹಕಾರದೊಂದಿಗೆ ಮಕ್ಕಳ ಕ್ರೀಡೆಗೆ ತೊಡಗಿಸಿಕೊಂಡಿದ್ದ ಅನುಭವ ಹಂಚಿಕೊಂಡರು. ಶಾಲಾ ಆಡಳಿತ ಮಂಡಳಿಯ ವ್ಯವಸ್ಥಾಪಕ ಎಂ. ಬಿ. ಮೊಣ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವ ಪಲ್ಲೇದ್, ಪ್ರಭಾರ ಮುಖ್ಯ ಶಿಕ್ಷಕಿ ಎನ್ ಪುಷ್ಪ , ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಸಂಘದ ವಿಭಾಗೀಯ ಪ್ರತಿನಿಧಿ ನವೀನ್, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರತ್ನಕುಮಾರ್,
ಪದಾಧಿಕಾರಿಗಳು, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಸುಕುಮಾರಿ, ಬಾಲಕಿಯರ ಪ್ರೌಢಶಾಲಾ
ಮುಖ್ಯ ಶಿಕ್ಷಕಿ ಬಿ.ಎನ್.ಪುಷ್ಪ, ಡಯಟ್ ನ ನಿವೃತ್ತ ಉಪನ್ಯಾಸಕಿ ಬಿ.ಬಿ.ಸಾವಿತ್ರಿ, ಮಕ್ಕಳ ಸುರಕ್ಷಾ ಸಮಿತಿ ಉಪಾಧ್ಯಕ್ಷ ಮಂಜುನಾಥ, ಪೋಷಕ ಪರಿಷತ್ತಿನ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷ ಮನು, ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಶಿಕ್ಷಕ ಸೋಮಯ್ಯ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಎಂ.ಎಸ್. ಕುಸುಮ ವಂದಿಸಿದರು.