ನಾಪೋಕ್ಲು ಆ.22 : ನಾಪೋಕ್ಲುವಿನ ವಿವಿಧೆಡೆ ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯ, ಕೂರುಳಿ ಸುಭಾಷ್ ನಗರ ಹಾಗೂ ಬಲ್ಲಮಾವಟಿಯ ಶ್ರೀ ಭಗವತಿ ದೇವಾಲಯಗಳಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಯಿತು.
ಪಾಡಿ ಶ್ರೀ ಇಗ್ಗುತಪ್ಪದೇವಾಲಯದಲ್ಲಿ ಅರ್ಚಕ ಜಗದೀಶ್ ಭಟ್ ದೇವಾಲಯದ ನಾಗನಕಟ್ಟೆಯಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ಬಳಿಕ ದೇವಾಲಯದಲ್ಲಿ ವಿಶೇಷ ಮಹಾಪೂಜೆ ಅನ್ನದಾನ ನೆರವೇರಿತು.
ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಅರ್ಚಕ ದೇವಿ ಪ್ರಸಾದ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ದೇವಾಲಯದಲ್ಲಿ ನಾಗನ ಕಲ್ಲಿಗೆ ಹಾಲು ,ಎಳೆ ನೀರು ಅಭಿಷೇಕ ಸೇರಿದಂತೆ ಹಣ್ಣು ಕಾಯಿ ಪೂಜೆಯನ್ನು ನೆರವೇರಿಸಿ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಿದರು.
ಕೂರುಳಿ ಸುಭಾಷ್ ನಗರದಲ್ಲಿ ಶ್ರೀ ಭಗವತಿ ದೇವಾಲಯದ ಅರ್ಚಕ ಹರೀಶ್ ಭಟ್ ನಾಗನಕಟ್ಟೆಯಲ್ಲಿ ನಾಗನ ಕಲ್ಲಿಗೆ ಪಂಚಾಮೃತ ಅಭಿಷೇಕ ಮಂಗಳಾರತಿ ಮಹಾಪೂಜೆಯನ್ನು ನೆರವೇರಿಸಿದರು. ಈ ಸಂದರ್ಭ ನಗರದ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಬಲ್ಲಮಾವಟಿ ಗ್ರಾಮದ ಭಗವತಿ ದೇವಾಲಯದ ಸಮೀಪ ನಾಗನಕಟ್ಟೆಯಲ್ಲಿ ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಅರ್ಚಕ ಶಶಿಧದ ಭಟ್ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು .
ಭಕ್ತಾದಿಗಳು ಅವರ ಅವರ ವ್ಯಾಪ್ತಿಯ ವಿವಿಧ ದೇವಾಲಯಗಳಿಗೆ ತೆರಳಿ ನಾಗದೇವತೆಗೆ ನಮನ ಸಲ್ಲಿಸಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಹಬ್ಬವನ್ನು ಆಚರಿಸಿಕೊಂಡರುದರು.
ವರದಿ : ದುಗ್ಗಳ ಸದಾನಂದ