ಸೋಮವಾರಪೇಟೆ ಆ.22 : ಐಗೂರು ವಿವಿದೋದ್ಧೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ 2022-23ನೇ ಸಾಲಿನಲ್ಲಿ 87.23 ಲಕ್ಷ ರೂ, ಲಾಭಗಳಿಸಿದ್ದು, ಸದಸ್ಯರಿಗೆ ಶೇ. 20 ಲಾಭಾಂಶ ನೀಡಲು ಮಹಾಸಭೆಯಲ್ಲಿ ತೀರ್ಮಾನಿಸಿದೆ.
ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಡಿ.ಎಚ್.ವಿಶ್ವನಾಥರಾಜೇ ಅರಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಂಘದಲ್ಲಿ ಒಟ್ಟು 1641 ಹಾಲಿ ಸದಸ್ಯರಿದ್ದು ಇದ್ದು, ಸದಸ್ಯರ 2.14 ಕೋಟಿ ರೂ., ಪಾಲು ಬಂಡವಾಳವಿರುತ್ತದೆ. ಪ್ರಸಕ್ತ ಸಾಲಿನಲ್ಲಿ 130.88 ಕೋಟಿ ರೂ. ವಹಿವಾಟು ನಡೆಸಲಾಗಿದ್ದು, ಲಾಭ ಗಳಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವ್ಯವಹಾರ ಮಾಡುವ ಮೂಲಕ ಸದಸ್ಯರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಸದಸ್ಯರಿಗೆ ಕೆ.ಸಿ.ಸಿ ಸಾಲ, ಸ್ವ ಸಹಾಯ ಗುಂಪು ಸಾಲ, ಜಾಮೀನು ಸಾಲ, ಆಭರಣ ಸಾಲ, ಗೊಬ್ಬರ ಸಾಲ ಒಟ್ಟು 25.49 ಕೋಟಿ ರೂ, ನೀಡಲಾಗಿದೆ. 11.73 ಕೋಟಿ ರೂ.ಗಳಷ್ಟು ಠೇವಣಿ ಇರುತ್ತದೆ. ಅಲ್ಲದೇ ಗೊಬ್ಬರ ವ್ಯಾಪಾರ ಹಾಗೂ ಮದು ್ದ ಗುಂಡು ವ್ಯಾಪಾರವನ್ನು ನಡೆಸಲಾಗುತ್ತಿದೆ. ಸದಸ್ಯರು ಸಂಘದೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡು, ತಾವು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿದಲ್ಲಿ ಇನ್ನೂ ಹೆಚಿ£್ಚÀ ಲಾಭಗಳಿಸಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭ ಸಂಘಕ್ಕೆ ಪ್ರಥಮವಾಗಿ ಕೆ.ಸಿ.ಸಿ ಸಾಲ ಮರುಪಾವತಿಸಿದ ಸಣ್ಣ ಹಾಗೂ ದೊಡ್ಡ ರೈತರಿಗೆ, ಸ್ವ ಸಹಾಯ ಗುಂಪುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಕೆ.ಪಿ.ರೋಷನ್, ನಿರ್ದೇಶಕರುಗಳಾದ ಹೆಚ್.ಬಿ.ಶಿವಕುಮಾರ್, ಡಿ.ಎಸ್. ಚಂಗಪ್ಪ, ಎಲ್.ಎಂ.ರಾಜೇಶ್, ಡಿ.ಕೆ. ಪೂವಯ್ಯ, ಡಿ.ಸಿ.ಸಬಿತ, ಎಸ್.ಜಿ.ರಾಣಿ, ಬಿ.ಸಿ.ಸುನೀಲ್, ಎಚ್.ಜೆ.ಬಸಪ್ಪ, ಎಸ್.ಕೆ.ರಘು, ಎಂ.ಬಿ.ಕಿಶೋರ್, ಎಸ್.ಕೆ.ಲಕ್ಷ್ಮಣ ಹಾಗು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎ.ಡಿಕ್ಕಿರಾಜು ಇದ್ದರು.










