ಮಡಿಕೇರಿ ಆ.22 : ಚೆಂಬು ವಲಯ ಕಾಂಗ್ರೆಸ್ ಸಭೆಯು ವಲಯಾಧ್ಯಕ್ಷ ರವಿರಾಜ್ ಹೊಸೂರು ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪಕ್ಷದ ಸಂಘಟನೆ ಮತ್ತು ಅಭಿವೃದ್ಧಿ ಕೆಲಸಗಳಲ್ಲಿ ಬೂತ್ ಅಧ್ಯಕ್ಷರುಗಳ ಜವಾಬ್ದಾರಿಯ ಬಗ್ಗೆ ಚರ್ಚಿಸಲಾಯಿತು.
ಸಭೆಗೆ ಗೈರಾದ ಬೂತ್ ಅಧ್ಯಕ್ಷರು ಮತ್ತು ಪಂಚಾಯತ್ ಸದಸ್ಯರು ಮಾಹಿತಿ ನೀಡುವಂತೆ ಸರ್ವಾನುಮತದಿಂದ ನಿರ್ಧರಿಸಲಾಯಿತು. ಅಲ್ಲದೇ ಪ್ರತಿ ತಿಂಗಳ ಮೂರನೇ ಶನಿವಾರದಂದು ವಲಯ ಕಾಂಗ್ರೆಸ್ ಸಭೆಯನ್ನು ನಡೆಸುವುದಾಗಿ ತೀರ್ಮಾನಿಸಲಾಯಿತು.
ಹಿಂದಿನ ಅವಧಿಯ ಹಲವು ಕಾಮಗಾರಿಗಳ ಅವ್ಯವಹಾರದ ಬಗ್ಗೆ ಚರ್ಚಿಸಲಾಯಿತಲ್ಲದೆ ಪ್ರಸಕ್ತ ಗ್ರಾಮದಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ಹಾಗೂ ಮುಂದಿನ ಅಭಿವೃದ್ಧಿಯ ಬಗ್ಗೆ ಸೂರಜ್ ಹೊಸೂರ್ ಸಭೆಗೆ ವಿಸ್ತೃತವಾಗಿ ವಿವರಿಸಿದರು.
ಈ ಹಿಂದೆ ನಡೆದ ಜನಸ್ಪಂದನ ಸಭೆಯಲ್ಲಿ ಶಾಸಕರು ಕೈಗೊಂಡ ಹಲವು ನಿರ್ಣಯಗಳ ಬಗ್ಗೆ ಚರ್ಚಿಸಿ, ಈ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಪ್ಪದೇ ಮನವರಿಕೆ ಮಾಡಬೇಕೆಂದು ಕಾರ್ಯಕರ್ತರಿಗೆ ತಿಳಿಸಲಾಯಿತು.
ಈಗಾಗಲೇ ಜೆಜೆಎಂ ವರದಿಯನ್ನು ಬೂತ್ ಅಧ್ಯಕ್ಷರು ಹಾಗೂ ಜವಾಬ್ದಾರಿಯುತ ಕಾರ್ಯಕರ್ತರು ನೀಡದಿರುವ ಬಗ್ಗೆ ಜಿ.ವಿ.ಗಣಪಯ್ಯ ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಮುಂದೆ ಇಂಥ ಲೋಪ ನಡೆಯದಂತೆ ತಿಳಿಹೇಳಿದರು.
ವಲಯಾಧ್ಯಕ್ಷರು ಮಾತನಾಡಿ ಕಳೆದ 4-5 ವರ್ಷದಲ್ಲಿ ಪಕ್ಷ ಬಲಗೊಂಡ ಬಗ್ಗೆ ಪ್ರಶಾಂಸೆ ವ್ಯಕ್ತಪಡಿಸಿ, ಕಾರ್ಯಕರ್ತರ ನಿಸ್ವಾರ್ಥ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಎ.ಎಸ್.ಪೊನ್ನಣ್ಣ ಚುನಾಯಿತರಾಗುವ ಮೊದಲೇ ಗ್ರಾಮಕ್ಕೆ ತಮ್ಮ ಸ್ವಂತ ವೆಚ್ಚದಲ್ಲಿ ನೀಡಿದ ಹತ್ತಾರು ಕೊಡುಗೆಗಳನ್ನು ಈ ಸಂದರ್ಭ ಸ್ಮರಿಸಲಾಯಿತು.
ಪಕ್ಷದ ಸಂಘಟನೆಗೆ ಬೆನ್ನೆಲುಬಾಗಿ ನಿಂತ ಶಾಸಕ ಎ.ಎಸ್ ಪೊನ್ನಣ್ಣ, ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮತ್ತು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್ ಅವರಿಗೆ ಈ ಸಂದರ್ಭ ಕಾರ್ಯಕರ್ತರಿಂದ ಮೆಚ್ಚುಗೆ ವ್ಯಕ್ತವಾಯಿತು.
ಸಭೆಯಲ್ಲಿ ಗ್ರಾ.ಪಂ ಸದಸ್ಯ ಆದಂ, ಸೆಂಟ್ಯಾರ್ ಹಿರಿಯರಾದ ಬಾಲಂಬಿ ಸೋಮಣ್ಣ , ಬಂಗಾರಕೋಡಿ ವೆಂಕಟರಮಣ, ಅರುಣೋದಯ ಕುಮಾರ್, ರಘುನಾಥ್ ಬಾಲಂಬಿ, ಪಕೀರ , ಚೆನ್ನಪ್ಪ ನಡುಬೆಟ್ಟು ಸೇರಿ ಹಲವು ಕಾರ್ಯಕರ್ತರು ಹಾಜರಿದ್ದರು.
ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಭಾರತಿ ಕುಶಾಲಪ್ಪ ವಂದಿಸಿದರು.