ಸೋಮವಾರಪೇಟೆ ಆ.22 : ಕಾಜೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಕಾಜೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಮನ ಸೆಳೆಯಿತು.
ಕಾರ್ಯಕ್ರಮವನ್ನು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಅವಶ್ಯಕ ಎಂದು ಹೇಳಿದರು.
ವೇದಿಕೆಯಲ್ಲಿ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಎಸ್‍ಡಿಎಂಸಿ ಉಪಾಧ್ಯಕ್ಷ ಡೇವಿಡ್, ಮುಖ್ಯ ಶಿಕ್ಷಕಿ ಸರಳಾ ಕುಮಾರಿ, ಗ್ರಾಮದ ಹಿರಿಯರಾದ ಅಪ್ಪಚ್ಚು, ಮೇದಪ್ಪ, ಮುತ್ತಪ್ಪ, ತೇಜಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಸಿಆರ್‍ಪಿ ಗಿರೀಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಯಶ್ವಂತ್‍ಕುಮಾರ್ ಇದ್ದರು.
1 ರಿಂದ 4ನೇ ತರಗತಿಯ ಶಾಲಾ ವಿಭಾಗದಲ್ಲಿ ಛದ್ಮವೇಷ ಸ್ಪರ್ಧೆಯಲ್ಲಿ ಕಾಜೂರು ಶಾಲೆಯ ಕೌಶಿಕ್ ಪ್ರಥಮ, ಸೋಮವಾರಪೇಟೆ ಸಂತ ಜೊಸೇಫರ ಶಾಲೆಯ ಚೈತನ್ಯ ದ್ವಿತೀಯ, ಕಿರಗಂದೂರು ಶಾಲೆಯ ಕುಶಾಲ ತೃತೀಯ ಸ್ಥಾನಗಳಿಸಿದರು. ಚಿತ್ರಕಲೆಯಲ್ಲಿ ಸೋಮವಾರಪೇಟೆ ಸಂತ ಜೊಸೇಫರ ಶಾಲೆಯ ತವನ್(ಪ್ರ), ಕಾಜೂರು ಶಾಲೆಯ ಯಶಸ್(ದ್ವಿ) ಹಾಗೂ ಬಳಗುಂದ ಶಾಲೆಯ ಯಶ್ವಂತ್(ತೃ), ಕ್ಲೇ ಮಾಡಲಿಂಗ್ ನಲ್ಲಿ ಸೋಮವಾರಪೇಟೆ ಸಂತ ಜೊಸೇಫರ ಶಾಲೆಯ ದೈವಿಕ್(ಪ್ರ), ಯಡವನಾಡು ಶಾಲೆಯ ಎ.ಕಿರಣ್(ದ್ವಿ) ಹಾಗೂ ಕಾಜೂರು ಶಾಲೆಯ ಜೆ.ಯಸ್ಮಿತ್(ತೃ) ಸ್ಥಾನ ಗಳಿಸಿದರು.
ಹಿರಿಯ ಪ್ರಾಥಮಿಕ ಶಾಲೆ 5 ರಿಂದ 7ನೇ ತರಗತಿ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ಸೋಮವಾರಪೇಟೆ ಸಂತ ಜೊಸೇಫರ ಶಾಲೆಯ ಖುಶಿ ಗೌಡ (ಪ್ರ), ಕಾಜೂರು ಶಾಲೆಯ ಯಶಿಕ (ದ್ವಿ) ಹಾಗೂ ಬೇಳೂರು ಶಾಲೆಯ ಆರ್ಯನ್ (ತೃ), ಕವನ ವಾಚನದಲ್ಲಿ ಕಾಜೂರು ಶಾಲೆಯ ಎಂ.ಕೆ. ಹಿತಾಶ್ರೀ(ಪ್ರ), ಸಂತ ಜೊಸೇಫರ ಶಾಲೆಯ ಯು.ಲಿಖಿತ್(ದ್ವಿ), ಯಡವಾರೆ ಶಾಲೆಯ ಕೆ.ಆರ್. ಸ್ಮಿತಾ(ತೃ), ಚಿತ್ರಕಲೆಯಲ್ಲಿ ಸೋಮವಾರಪೇಟೆ ಸಂತ ಜೊಸೇಫರ ಶಾಲೆಯ ರಿಯಾನ ಸಿಕ್ವೆರಾ(ಪ್ರ), ಯಡವನಾಡು ಆಶ್ರಮ ಶಾಲೆಯ ಜೆ.ಸಿ. ಗಿರೀಶ್(ದ್ವಿ), ಕಾಜೂರು ಶಾಲೆಯ ಎಸ್. ಪೃಥ್ವಿ(ತೃ) ಸ್ಥಾನ ಗಳಿಸಿದರು.
ಪ್ರೌಢಶಾಲಾ ವಿಭಾಗದ ಜಾನಪದ ಗೀತೆ ವಿಭಾಗದಲ್ಲಿ ಕಾಜೂರಿನ ಹಿರಿಯ ಪ್ರಾಥಮಿಕ ಶಾಲೆಯ ಎನ್. ಜಸಿಲ(ಪ್ರ), ಕಿರಗಂದೂರು ಶಾಲೆಯ ಕೆ.ವಿ. ನಿಶಾಂತ್(ದ್ವಿ), ಸೋಮವಾರಪೇಟೆ ಸಂತ ಜೊಸೇಫರ ಶಾಲೆಯ ವಿಯೋಲಿನ್ ಲೋಬೋ (ತೃ), ಭಾವಗೀತೆ ಸೋಮವಾರಪೇಟೆ ಸಂತ ಜೊಸೇಫರ ಶಾಲೆಯ ಜಾನ್ಸಿ ಮೋರಸ್(ಪ್ರ), ಕಿರಗಂದೂರು ಶಾಲೆಯ ಕೆ.ಎಸ್. ಗನ್ಯ(ದ್ವಿ) ಮತ್ತು ಸೋಮವಾರಪೇಟೆ ಸಂತ ಜೊಸೇಫರ ಶಾಲೆಯ ಎಂ.ಜಿ. ಹರ್ಷಿತ್(ತೃ), ಆಂಗ್ಲ ಭಾಷಣ ಸ್ಪರ್ಧೆಯಲ್ಲಿ ಸೋಮವಾರಪೇಟೆ ಸಂತ ಜೊಸೇಫರ ಶಾಲೆಯ ಎಂ.ಸಿ. ವರ್ಷಿಣಿ (ಪ್ರ), ಐಗೂರು ಶಾಲೆಯ ಬಿ.ಜಿ. ದನುಶ್ರೀ (ದ್ವಿ) ಸೋಮವಾರಪೇಟೆ ಸಂತ ಜೊಸೇಫರ ಶಾಲೆಯ ಎಸ್.ಆರ್.ಸಾಹಿತ್ಯ(ತೃ), ಹಿಂದಿ ಭಾಷಣ ಸ್ಪರ್ಧೆಯಲ್ಲಿ ಸೋಮವಾರಪೇಟೆ ಸಂತ ಜೊಸೇಫರ ಶಾಲೆಯ ಸಾನ್ವಿ ಚಂದ್ರೇಶ್(ಪ್ರ), ಎಚ್.ವಿ. ಪಲ್ಲವಿ(ದ್ವಿ), ಐಗೂರು ಶಾಲೆಯ ಎಚ್.ಆರ್. ಲಿಖಿತ(ತೃ), ಕನ್ನಡ ಭಾಷಣದ ಸ್ಪರ್ಧೆಯಲ್ಲಿ ಸೋಮವಾರಪೇಟೆ ಸಂತ ಜೊಸೇಫರ ಶಾಲೆಯ ಜ್ಞಾನವಿ (ಪ್ರ), ಎಂ.ಎ. ವೈಭವಿ(ದ್ವಿ) ಹಾಗೂ ಐಗೂರು ಶಾಲೆಯ ವಿಜಯಕುಮಾರ್(ತೃ) ಸ್ಥಾನಗಳಿಸಿದರು.








