ಮಡಿಕೇರಿ ಆ.24 : ನಗರದ ಶ್ರೀ ಕೋಟೆ ಮಹಾಗಣಪತಿ ದೇವಾಲಯದಲ್ಲಿ ದೇವಾಲಯದ ಚಂದಾ ಪುಸ್ತಕದ ಪೂಜಾ ಕಾರ್ಯಕ್ರಮ ನಡೆಯಿತು.
ಮಡಿಕೇರಿಯ ಐತಿಹಾಸಿಕ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಅ.26 ರಂದು ದಶಮಂಟಪ ಶೋಬಾಯಾತ್ರೆ ನಡೆಯಲಿದೆ. ಇದಕ್ಕಾಗಿ ದಶಮಂಟಪ ಸಮಿತಿಗಳು ಸಿದ್ದತೆಯನ್ನು ಮಾಡುತ್ತಿವೆ. ದಶಮಂಟಪಗಳಲ್ಲಿ ಒಂದಾದ ಶ್ರೀ ಕೋಟೆ ಮಹಾಗಣಪತಿ ದೇವಾಲಯಕ್ಕೆ ಶಾಸಕ ಮಂತರ್ ಗೌಡ ಭೇಟಿ ನೀಡಿ ಚಂದಾ ಪುಸ್ತಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಮಿತಿ ವತಿಯಿಂದ 101 ತೆಂಗಿನಕಾಯಿಯ ಹರಕೆಯನ್ನು ಶಾಸಕರ ಉಪಸ್ಥಿತಿಯಲ್ಲಿ ಸಮರ್ಪಿಸಲಾಯಿತು.
ಶಾಸಕರು ಕೋಟೆ ಮಹಾಗಣಪತಿ ಸಮಿತಿ ಸದಸ್ಯರಾಗಿ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಮಂಟಪದ ಅಧ್ಯಕ್ಷ ಹೆಚ್.ಪಿ.ಲೊಕೇಶ್, ಉಪಾದ್ಯಕ್ಷರಾದ ನಜೀರ್ , ಸುದೀಶ್ , ಮೇಲ್ವಿನ್
ಖಜಾಂಜಿ ಬಿ.ಎಂ.ಸಂತೋಷ್ ಕಾರ್ಯದರ್ಶಿ ವಿಗ್ನೇಶ್, ಹಿರಿಯ ಸದಸ್ಯರು ಹಾಗು ಟೀಮ್ 99 ಸದಸ್ಯರು ಹಾಜರಿದ್ದರು.








