ಮಡಿಕೇರಿ ಆ.24 : ಚಂದ್ರಯಾನ-3 ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸುಂಟಿಕೊಪ್ಪನಾಗರಿಕರು ಸಂಭ್ರಮಾಚರಣೆ ನಡೆಸಿದರು.
ಕನ್ನಡ ವೃತ್ತದಲ್ಲಿ ಜಮಾಯಿಸಿದ ನಾಗರೀಕರು, ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುತ್ತಿದ್ದಂತೆ ಜಯಘೋಷಗಳನ್ನು ಕೂಗಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿ, ಜೈಕಾರ ಹಾಕಿದರು.
ನಂತರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಡಿ.ನರಸಿಂಹ, ಕೆ.ಎಸ್.ಅನಿಲ್, ರಂಜಿತ್, ಬಿ.ಎಸ್.ಆಶೋಕ, ವಿಶ್ವನಾಥ ರೈ, ಧನುಕಾವೇರಪ್ಪ ಮತ್ತಿತರರು ಹಾಜರಿದ್ದರು.