ಮಡಿಕೇರಿ ಆ.25 : ಅಕ್ರಮ ಜೂಜಾಟ ನಡೆಸುತ್ತಿದ್ದ ಕೊಡಗು ಜಿಲ್ಲಾ ಪೊಲೀಸರು ಬಂಧಿಸಿರುವ ಘಟನೆ ಕಾಂತೂರು ಮೂರ್ನಾಡು ಗ್ರಾಮದಲ್ಲಿ ನಡೆದಿದೆ.
ಕಾಂತೂರು-ಮೂರ್ನಾಡು ಗ್ರಾಮದ ನಿವಾಸಿ ಕೆ.ವಿ.ಚೇತನ್ (38), ಪಾಲೂರಿನ ಪಿ.ಎಸ್.ಶೇಖರ್ (50), ಅವಂದೂರು ಗ್ರಾಮದ ಶರತ್ ಕುಮಾರ್ (42), ಹೊಸ್ಕೇರಿಯ ಉಳುವಾರನ ಗಣೇಶ್ (48), ಕಟ್ಟೆಮಾಡು ಗ್ರಾಮದ ಪಿ.ಟಿ.ಸತೀಶ್ (38), ಅಪ್ಪಂಗಳದ ಕೆ.ಎಂ.ಕಾರ್ಯಪ್ಪ (44), ಹೆರವನಾಡು ಗ್ರಾಮದ ಸಕೇಶ್ ಕುಮಾರ್ (43), ದೇಚೂರಿನ ಬಿ.ಎಸ್.ರವಿ ಎಂಬವರೆ ಬಂಧಿತ ಆರೋಪಿಗಳು.
ಕಾಂತೂರು-ಮೂರ್ನಾಡು ಗ್ರಾಮದ ತೋಟದಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆ, ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಉಪವಿಭಾಗದ ಡಿವೈಎಸ್‍ಪಿ ಜಗದೀಶ್, ವೃತ್ತ ನಿರೀಕ್ಷಕ ಉಮೇಶ್ ಯು. ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಎಸ್‍ಐ ಶ್ರೀನಿವಾಸಲು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಮಾಹಿತಿ ನೀಡಲು ಮನವಿ : ಅಕ್ರಮ ಚಟುವಟಿಕೆಗಳು ನಡೆಸುತ್ತಿರುವುದು ಕಂಡ ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ. ತಂತ್ರಾಂಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಎಸ್‍ಪಿ ಕೆ. ರಾಮರಾಜನ್ ಅವರು, ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.