ಮಡಿಕೇರಿ ಸೆ.11 : ನವ ದೆಹಲಿಯಲ್ಲಿ ಸೆ.18 ರಿಂದ ನಡೆಯುವ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಎನ್‍ಸಿಸಿ ಶಿಬಿರ – ಆಲ್ ಇಂಡಿಯಾ ಸೈನಿಕ್ ಕ್ಯಾಂಪ್ ಗೆ , ವಿರಾಜಪೇಟೆಯ ಆಯುಷ್ ಎಂ.ಡಿ ಕರ್ನಾಟಕ ಮತ್ತು ಗೋವಾ ಡೈರೆಕ್ಟೊರೇಟ್ ನಿಂದ ಆಯ್ಕೆಯಾಗಿದ್ದಾರೆ.
ಆಯುಷ್ ಮೈಸೂರಿನ ದಿ ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ವಿರಾಜಪೇಟೆಯ ಡಾ.ಸುಪ್ರೀತ ಹಾಗೂ ಡಾ.ದೀಪಕ್ ಅವರ ಪುತ್ರ.









