ಮಡಿಕೇರಿ ಅ.1 : ನಗರದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಎನ್ ಸಿ ಸಿ ಘಟಕ ಮತ್ತು 19 ಕರ್ನಾಟಕ ಬಟಾಲಿಯನ್ ಎನ್ ಸಿ ಸಿ ಮಡಿಕೇರಿ ಇವರ ಸಹಯೋಗದಲ್ಲಿ ” ಏಕ್ ತರೇಕ್ ಏಕ್ ಝಂಡಾ” ಅಭಿಯಾನದ ಅನ್ವಯ ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಚತಾ ಕಾರ್ಯವನ್ನು ಮಡಿಕೇರಿ ನಗರದ ವಿವಿಧ ಸ್ಥಳಗಳಲ್ಲಿ ಕೈಗೊಳ್ಳಲಾಯಿತು.
ಕಸ ಮುಕ್ತ ಭಾರತವನ್ನಾಗಿಸುವ ಉದ್ದೇಶದಿಂದ ರಾಷ್ಟ್ರದಾದ್ಯಂತ ಕೈಗೊಳ್ಳಲಾಗುತ್ತಿರುವ ” ಸ್ವಚ್ಚತಾಯೇ ಸೇವಾ ಅಭಿಯಾನದ ಭಾಗವಾಗಿಯೂ ಈ ಚಟುವಟಿಕೆಯನ್ನು ರೂಪಿಸಲಾಯಿತು. ಅಭಿಯಾನದಲ್ಲಿ ನಗರದ ಕೆಎಸ್ ಆರ್ ಟಿ ಸಿ ಬಸ್ಸು ನಿಲ್ಧಾಣದ ಆವರಣ ಹಾಗೂ ಅಸುಪಾಸಿನ ಪ್ರದೇಶವನ್ನು ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಸ್ವಚ್ಚಗೊಳಿಸಿದರು.
ಅಭಿಯಾನದಲ್ಲಿ 19 ಕರ್ನಾಟಕ ಬಟಾಲಿಯನ್ ಕಮಾಂಡಿಗ್ ಅಧಿಕಾರಿ ಕರ್ನಲ್ ಜೆಪ್ರೀನ್ ಗಿಲ್ಬರ್ಟ್ ಆರ್ನಾ ಅವರು ಅಧ್ಯಕ್ಷತೆ ವಹಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ಎಸ್ ಜಿ ಟಿ ಕೆಡೆಟ್ ಕೊಡಗು ವಿದ್ಯಾಲಯದ ವಿದ್ಯಾರ್ಥಿ ರಘುವಂಶಿ ಅವರು ನೈರ್ಮಲ್ಯದ ಕುರಿತು ಮಾತನಾಡಿದರು. ಸುಬೇದರ್ ಪ್ರವೀಣ್ ಕುಮಾರ್ ಅವರು ಉಪಸ್ಥಿತರಿದ್ದರು. ಕೊಡಗಿನ 21 ಶೈಕ್ಷಣಿಕ ಸಂಸ್ಥೆಗಳಿಂದ ಎನ್ ಸಿ ಕೆಡಟ್ ಗಳು ಈ ಅಭಿಯಾನದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಎನ್ ಸಿ ಸಿ ಘಟಕ ಹಾಗೂ ಕಾಲೇಜಿನ ಉಪನ್ಯಾಸಕ ವಿಶಾಲ್ ಸಿ ಪಿ ಸಂಯೋಜಿಸಿದರು.











