*ಮಡಿಕೇರಿ ತಾಲೂಕು ಕ.ಸಾ.ಪ ಅಧ್ಯಕ್ಷರಿಗೆ ಸನ್ಮಾನ : ಪುಸ್ತಕಗಳ ವಿತರಣೆ*
30/09/2023

ಮಡಿಕೇರಿ ಸೆ.30 : ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ವತಿಯಿಂದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರನ್ನು ಸನ್ಮಾನಿಸಲಾಯಿತು.
ಪುಸ್ತಕಗಳ ವಿತರಣೆ : ಇದೇ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕಿನ ಪದಾಧಿಕಾರಿಗಳು ಹಾಗೂ ಮಹಿಳಾ ಬರಹಗಾರರ ಒಕ್ಕೂಟದ ಅಧ್ಯಕರು ಮತ್ತು ಪ್ರತಿನಿಧಿಗಳಿಗೆ ಇತ್ತೀಚಿಗೆ ಬಿಡುಗಡೆಗೊಂಡ ನನ್ನ ಅರಿವಿನ ಪ್ರವಾದಿ ಎಂಬ ಪುಸ್ತಕಗಳನ್ನು ವಿತರಿಸಲಾಯಿತು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಟಿ.ಪಿ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಹಾಗೂ ಕ.ಸಾ.ಪ ತಾಲ್ಲೂಕಿನ ನಿಕಟ ಪೂರ್ವ ಅಧ್ಯಕ್ಷ ಅಂಬೆಕಲ್ ನವೀನ್, ಸ್ಥಾನೀಯ ಸಂಚಾಲಕಿ ವಹೀದ ಶೌಕತ್, ಮಫೀದ ಮರ್ಯಮ್ ತಾಹೀರ ಹಾಗೂ ಆಲೀಯಾ ಶೌಕತ್ ಹಾಜರಿದ್ದರು.
