ಮಡಿಕೇರಿ ಅ.2 : ಶಿಕ್ಷಣ ಇಲಾಖೆ ವತಿಯಿಂದ ಮಾದಾಪುರದ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ವಿರಾಜಪೇಟೆ ತಾಲ್ಲೂಕಿನ ಅರುವತ್ತೋಕ್ಲುವಿನ ಸರ್ವಧೈವತ ಪದವಿ ಪೂರ್ವ ಕಾಲೇಜ್ ನ ವಿದ್ಯಾರ್ಥಿಗಳು ಗೆಲವು ಸಾಧಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ಹಾಗೂ ಬಾಲಕಿಯರ ತಂಡಗಳು ಪ್ರಥಮ ಸ್ಥಾನ ಪಡೆದುಕೊಂಡಿವೆ. ತಂಡದ ವ್ಯವಸ್ಥಾಪಕರಾಗಿ ಕಲ್ಲುಮುಟ್ಲು ಜಶ್ಮಿ, ನಿಧಿ ಸೋಮಣ್ಣ ಹಾಗೂ ತರಬೇತುದಾರರಾಗಿ ಪ್ರಮೋದ್ ಕಾರ್ಯನಿರ್ವಹಿಸಿದರು.









