ಮಡಿಕೇರಿ ಅ.2 : ಮಡಿಕೇರಿ ನಗರದ ಕಲಾವಿದ ಸಂದೀಪ್ ಕುಮಾರ್ ಆರ್. ಅವರು ರಚಿಸಿದ 9 ಅಡಿ ಎತ್ತರದ ಸುಂದರವಾದ ಮಹಾತ್ಮಗಾಂಧಿ ಪ್ರತಿಮೆಯನ್ನು ಗಾಳಿಬೀಡು ನವೋದಯ ವಿದ್ಯಾಸಂಸ್ಥೆಯ ಆವರಣದಲ್ಲಿ ಅನಾವರಣಗೊಳಿಸಲಾಯಿತು. ಗಾಂಧಿ ಜಯಂತಿಯ ದಿನವಾದ ಇಂದು ಪ್ರತಿಮೆಯನ್ನು ಅನಾವರಣಗೊಳಿಸಿದ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಕಲಾವಿದ ಸಂದೀಪ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಶಾಲಾ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.












