ಮಡಿಕೇರಿ ಅ.3 : ದೇವರಕೊಲ್ಲಿ ಬದ್ರಿಯಾ ಮಸ್ಜಿದ್ ಮತ್ತು ನೂರುಲ್ ಇಸ್ಲಾಂ ಸಮಿತಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ ಜನ್ಮ ದಿನದ ಅಂಗವಾಗಿ ಇಸ್ಕ್ ಹಾಗೂ ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಿತು.
ಮಸೀದಿ ಅಧ್ಯಕ್ಷ ಕೆ.ಸಿ.ಹಂಸ ಧ್ವಜಾರೋಹಣ ನೆರವೇರಿಸಿದರು. ಮಸೀದಿ ಇಮಾಮಾರಾದ ಜಲೀಲ್ ಸಖಾಫಿ ದುಆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಹನೀಫ್ ಚೊಕ್ಕಂಡಳ್ಳಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮದೆ ಗ್ರಾ.ಪಂ ಸದಸ್ಯ ಸೈದಲವಿ ಪಾಲ್ಗೊಂಡು ಶುಭಹಾರೈಸಿದರು.
ಮಗ್ರಿಬ್ ನಮಾಜಿನ ನಂತರ ಉಮ್ಮರ್ ಸಖಾಫಿ ಕೊಂಡಂಗೇರಿ, ಮುದರಿಸ್ ಸಿರಾಜುಲ್ ಹುದಾ ಕುಟ್ಯಾಡಿ ಹುಬ್ಬುರಸೂಲ್ ಪ್ರಭಾಷಣ ಹಾಗೂ ದುಆ ನೆರವೇರಿಸಿದರು. ಕೊನೆಯಲ್ಲಿ ಅಬ್ಬಾಸ್ ಹಾಜಿ ಉಚ್ಚಿಲ, ಜಾಬಿರ್ ನಿಜಾಮಿ (save the dreams) ಮತ್ತು ಹಲವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ದೇವರಕೊಲ್ಲಿ ಬದ್ರಿಯಾ ಮಸ್ಜಿದ್ ಕಾರ್ಯದರ್ಶಿ ಮುಸ್ತಫಾ, ಮಾಜಿಅಧ್ಯಕ್ಷ ಸಿ.ಎ.ಅಶ್ರಫ್, ಮಾಜಿ ಕಾರ್ಯದರ್ಶಿ ಈ.ಕೆ. ನಾಸಿರ್, ನೂರುಲ್ ಇಸ್ಲಾಂ ಅಧ್ಯಕ್ಷ ಟಿ.ಬಿ.ಸಮೀರ್, ನೂರುಲ್ ಇಸ್ಲಾಂ ಕಾರ್ಯದರ್ಶಿ ಎಂ.ಎಸ್.ರಿಯಾಸ್, ಕೊಯಾನಾಡು ಜುಮಾ ಮಸ್ಜಿದ್ ಅಧ್ಯಕ್ಷ ಎಸ್.ಯು.ಅಬ್ದುಲ್ ರಜಾಕ್, ಕೊಯಾನಾಡು ಜುಮಾ ಮಸ್ಜಿದ್ ಕಾರ್ಯದರ್ಶಿ ಹಸೈನಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.








