ನಾಪೋಕ್ಲು ಅ.3 : ಗ್ರಾಮಗಳ ಪರಿಸರ ಸ್ವಚ್ಛವಾದಾಗ ಮಾತ್ರ ಎಲ್ಲರೂ ಆರೋಗ್ಯವಂತರಾಗಲು ಸಾಧ್ಯ ಎಂದು ಸ್ಥಳಿಯ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹೇಳಿದರು.
ಕಲ್ಲುಮೊಟ್ಟೆ ಗ್ರಾಮ ಪಂಚಾಯಿತಿ ವತಿಯಿಂದ ಸಮುದಾಯ ಭವನದಲ್ಲಿ ಆಯೋಜಿಸಿದ ಸ್ವಚ್ಚ ಭಾರತ್ ಅಭಿಯಾನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ಒಗ್ಗಟ್ಟಾಗಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದರ ಮೂಲಕ ಸ್ವಚ್ಛ ಭಾರತ್ ಅಭಿಯಾನಕ್ಕೆ ಸಹರಿಸುವಂತೆ ಮನವಿ ಮಾಡಿದರು.
ಅಭಿವೃದ್ಧಿ ಅಧಿಕಾರಿ ಚೋoದಕ್ಕಿ ಮಾತನಾಡಿ, ಗ್ರಾಮಸ್ಥರು ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ ಬಂದಾಗ ಗ್ರಾಮ ಸಭೆಗೆ ಅಥವಾ ಪಂಚಾಯಿತಿ ಗಮನಕ್ಕೆ ತರುವಂತೆ ತಿಳಿಸಿದರು.
ಗ್ರಾ.ಪಂ ಉಪಾಧ್ಯಕ್ಷ ಹೇಮಾ ಅರುಣ್, ಸದಸ್ಯ ಕುಲ್ಲೇಟಿರ ಅರುಣ್ ಬೇಬ, ಶಿವಚಳಿಯಂಡ ಜಗದೀಶ್ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸ್ವಚ್ಚತಾ ಪ್ರತಿಜ್ಞಾ ವಿಧಿ ಮಾಡಲಾಯಿತು. ಶೌರ್ಯ ತಂಡ ಬಾಳೆಯಡ ದಿವ್ಯಾ,ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರು, ಸಾರ್ವಜನಿಕರು ಹಾಜರಿದ್ದರು. ಆಶಾಲತಾ ಸ್ವಾಗತಿಸಿದರು. ಪಿಡಿಒ ಚೋoದಕ್ಕಿ ವಂದಿಸಿದರು.
ಈ ಸಂದರ್ಭ ಸಮುದಾಯ ಭವನ ದ ಪರಿಸರವನ್ನು ಎಲ್ಲರೂ ಸೇರಿ ಶ್ರಮದಾನವನ್ನು ಮಾಡಲಾಯಿತು.
ವರದಿ : ದುಗ್ಗಳ ಸದಾನಂದ








