ಸುಂಟಿಕೊಪ್ಪ ಅ.3 : ಮಾದಾಪುರ ಗ್ರಾಮ ಪಂಚಾಯಿತಿಗೆ 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.
ವಿಕಾಸಸೌಧದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ಮಾದಾಪುರ ಗ್ರಾ.ಪಂ ಅಧ್ಯಕ್ಷ ಮನುಬಿದ್ದಪ್ಪ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸುಮೇಶ್ ಭಾವೆ ಸ್ವೀಕರಿಸಿದರು.
ಗ್ರಾಮ ಪಂಚಾಯಿತಿಯ ಅತ್ಯುತ್ತಮ ಕಾರ್ಯನಿರ್ವಹಣೆ ಕಸ ವಿಲೇವಾರಿ ಅಭಿವೃದ್ಧಿ ಕಾರ್ಯದಲ್ಲಿ ತೋರಿದ ಕಾರ್ಯಕ್ಷಮತೆ, ಪಾರದರ್ಶಕ ಆಡಳಿತ, ಸ್ವಚ್ಚತೆಗೆ ಆದ್ಯತೆ ಸೇರಿದಂತೆ ಉತ್ತಮ ಆಡಳಿತ ನಡೆಸಿದ ರಾಜ್ಯದ 233 ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರಕಾರ ಗಾಂಧಿ ಗ್ರಾಮ ಪ್ರಶಸ್ತಿ ನೀಡಿದ್ದು, ಅದರಲ್ಲಿ ಕೊಡಗಿನ ಮಾದಾಪುರ, ಗುಡ್ಡೆಹೊಸೂರು, ಗಾಳಿಬೀಡು, ಹಾತೂರು ಹಾಗೂ ಕಣ್ಣಂಗಾಲ ಗ್ರಾ.ಪಂ ಪ್ರಶಸ್ತಿಗೆ ಭಾಜನವಾಗಿದೆ. 5 ಲಕ್ಷ ರೂ ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ವಿತರಿಸಲಾಯಿತು.









