ಸಿದ್ದಾಪುರ ಅ.3 : ಗುಹ್ಯ ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ತರಬ್ಯಿತ್ತುಲ್ ಇಸ್ಲಾಂ ಕಮಿಟಿ ವತಿಯಿಂದ ನೂರುಲ್ ಇಸ್ಲಾಂ ಮದರಸ ಆವರಣದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಮಿಲಾದ್ ಅಂಗವಾಗಿ ಮಸೀದಿ ಹಾಗೂ ಮದರಸ ಕಟ್ಟಡವು ವಿದ್ಯುತ್ ಅಲಂಕೃತ ದೀಪಗಳಿಂದ ಕಂಗೊಳಿಸುತ್ತಿತ್ತು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಮದರಸ ವಿದ್ಯಾರ್ಥಿಗಳಿಂದ ಮೌಲುದ್ ಪಾರಾಯಣ, ದಪ್ ಪ್ರದರ್ಶನ, ಮಜ್ಲಿಸ್, ಖವಾಲಿ, ಗಾಯನ, ಧಾರ್ಮಿಕ, ಸಾಂಸ್ಕೃತಿಕ, ಸ್ಕೌಟ್ಸ್ ಕಾರ್ಯಕ್ರಮಗಳು ಗಮನ ಸೆಳೆಯಿತು.
ಮದರಸ ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಿಲಾದ್ ಆಚರಣೆಯ ಅಂಗವಾಗಿ ಪ್ರವಾದಿ ಸಂದೇಶ ಘೋಷಣ ರ‍್ಯಾಲಿ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮದರಸಾ ವಿದ್ಯಾರ್ಥಿಗಳ ಸ್ಕೌಟ್ಸ್, ದಫ್ ಪ್ರದರ್ಶನಗಳ ಮೂಲಕ ಸಂಚರಿಸಿತು.
ಸುತ್ತಮುತ್ತಲ ಭಾಗಗಳಿಂದ ಆಗಮಿಸಿದ ಸಾವಿರಾರು ಮಂದಿ ಸಂದೇಶ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯರು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ಸಿ.ಎಂ ಮುಸ್ತಫ, ಉಪಾಧ್ಯಕ್ಷ ಕೆ.ಎ.ಬಶೀರ್, ಪ್ರಧಾನ ಕಾರ್ಯದರ್ಶಿ ಅಶ್ರಫ್,
ಖಜಾಂಜಿ ಎಂ.ಎ.ಮುಸ್ತಫಾ, ಮಸೀದಿಯ ಖತೀಬ್ ಹನೀಫ್ ರಹ್ಮಾನಿ, ಮದರಸ ಮುಖ್ಯ ಶಿಕ್ಷಕ ಸಿರಾಜುದ್ದೀನ್
ಸೇರಿದಂತೆ ಮತ್ತಿತರರು ಹಾಜರಿದ್ದರು.








