ಮಡಿಕೇರಿ ಅ.10 : ಕೊಡಗು ಜಿಲ್ಲಾ ಕಾಂಗ್ರೆಸ್ ಸೇವಾದಳ ಸಮಿತಿಯ ಸಭೆಯು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸೇವಾದಳದ ರಾಜ್ಯ ಮುಖ್ಯ ಸಂಘಟಕ ಎಂ.ರಾಮಚಂದ್ರ ಅವರು ಭಾರತ್ ಸೇವಾದಳವನ್ನು 1923 ಡಿ.26 ರಂದು ಎನ್.ಎಸ್.ಹಾರ್ಡಿಕರ್ ಅವರು ಸ್ಥಾಪನೆ ಮಾಡಿದ್ದು, ಇದೀಗ 100 ವರ್ಷ ಪೂರೈಸುತ್ತಿದೆ. ಶತಮಾನೋತ್ಸವದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅ.29 ರಂದು ಪಾದಯಾತ್ರೆ ಮತ್ತು ಬೃಹತ್ ಸಮಾವೇಶ ನಡೆಯಲಿದೆ ಎಂದರು.
ಸೇವಾದಳದ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಅವರ ನೇತೃತ್ವದಲ್ಲ್ಲಿ ನಡೆದ ಸಭೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಆಯೋಜಿಸಲಾಗುವ ಸೇವಾದಳ ಸಮಿತಿಯ ರಾಜ್ಯ ಮಟ್ಟದ ಸಮಾವೇಶ, ಮುಂಬರುವ ಜಿ.ಪಂ, ತಾ.ಪಂ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸೇವಾದಳ ಸಕ್ರಿಯವಾಗುವ ಹಾಗೂ ಜಿಲ್ಲಾ, ಬ್ಲಾಕ್, ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸುವ ಕುರಿತು ಚರ್ಚಿಸಲಾಯಿತು.
ಇದೇ ಸಂದರ್ಭ ಎಂ.ರಾಮಚಂದ್ರ ಅವರನ್ನು ಸೇವಾದಳದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸೇವಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ತೆರೆಸಾ ವಿಕ್ಟರ್, ರಾಜ್ಯ ಉಪಾಧ್ಯಕ್ಷರಾದ ಜಾಕೀರ್ ಹುಸೇನ್, ರಮೇಶ್, ಸಮೀರ್, ಮಡಿಕೇರಿ ನಗರಾಧ್ಯಕ್ಷ ಬಿ.ವೈ.ರಾಜೇಶ್, ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ, ಸೇವಾದಳದ ಬ್ಲಾಕ್ ಅಧ್ಯಕ್ಷರುಗಳಾದ ಹಯಾತ್, ಪಿಯೂಸ್ ಪೆರೇರಾ, ಬಸವರಾಜ್, ಸಾಹುಲ್ ಹಮೀದ್, ಪಿ.ಜಿ.ಶೇಖರ್, ಪ್ರಧಾನ ಕಾರ್ಯದರ್ಶಿಗಳಾದ ಹಬೀಬ್ ಅಹಮ್ಮದ್, ಧ್ರುವಕುಮಾರ್, ಎಂ.ಎಸ್.ಶೇಖರ್, ಪಿ.ಬಿ.ರವೀನ, ಹಿರಿಯ ಮಹಿಳಾ ಅಧ್ಯಕ್ಷರಾದ ಪ್ರೇಮ, ಉಪಾಧ್ಯಕ್ಷೆ ಪಾಂಡನ ಪುಷ್ಪವೇಣಿ, ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್, ಡಿಸಿಸಿ ಗೌರವ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಸೇನಾ ಘಟಕದ ಜಿಲ್ಲಾಧ್ಯಕ್ಷ ಬೊಳ್ಳಿಯಂಡ ಗಣೇಶ್, ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ, ಪ್ರಮುಖರಾದ ಮುನೀರ್ ಮಾಚರ್, ರವಿ ಗೌಡ, ಹನೀಫ್, ಪ್ರೇಮಾ ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಅನಿಶ್ ಅಹಮ್ಮದ್ ಸ್ವಾಗತಿಸಿದರು.










