Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಹಳೆಯ ಮೀಸಲಾತಿ ನಿಯಮಗಳಂತೆ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧರಿಸಿರುವುದು ಸ್ವಾಗತಾರ್ಹ*
  • *ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ‘Whistle Blower Policy’ ಜಾರಿ – ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ*
  • *ಕೊಡಗು ಪೊಲೀಸ್ ಶ್ವಾನ ದಳಕ್ಕೆ ಶ್ವಾನ ಕೊಡುಗೆ ನೀಡಿದ ಎ.ಯು.ಪೂವಯ್ಯ*
  • *ತೋಳುರುಶೆಟ್ಟಳ್ಳಿಯಲ್ಲಿ ಅಗ್ನಿ ಅವಘಡ : ಸಿ ಆರ್ ಪಿ ಎಫ್ ಯೋಧ ಸಾವು*
  • *‘ಮುಕ್ಕಾಟಿರ ಕ್ರಿಕೆಟ್ ನಮ್ಮೆ’ಯ ವೆಬ್ ಸೈಟ್ ಬಿಡುಗಡೆ ಮತ್ತು ತಂಡಗಳ ನೋಂದಣಿ ಪ್ರಕ್ರಿಯೆ ಉದ್ಘಾಟನೆ : ಅಮೋಘ ಕ್ರೀಡಾಸ್ಫೂರ್ತಿ ಕೊಡಗು ಜಿಲ್ಲೆಯಲ್ಲಿ ಮಾತ್ರ ಕಾಣಲು ಸಾಧ್ಯ : ಡಾ.ಮಂಡೇಪಂಡ ಪುಷ್ಪ ಕುಟ್ಟಣ್ಣ ಅಭಿಪ್ರಾಯ*
  • *ಭಾರತದ ಆರ್ಥಿಕತೆಗೆ ಯುದ್ಧದ ‘ಶಾಕ್’:ರೂಪಾಯಿ ಮೌಲ್ಯ ಪಾತಾಳಕ್ಕೆ,ಸಾರಿಗೆ ವೆಚ್ಚ ದುಬಾರಿ!*
  • *ಕೆ.ನಿಡುಗಣೆ ಗ್ರಾ.ಪಂ.ಕಚೇರಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲು ಶಾಸಕರ ಸೂಚನೆ*
  • *ಯುದ್ಧ ಪರಿಸ್ಥಿತಿ : HELPLINE ಸಂಖ್ಯೆಗಳು ಇಲ್ಲಿವೆ*
  • *ಮಾ.03 ರಂದು ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ದೇವಾಲಯಗಳಲ್ಲಿ ಸೇವೆಗಳಲ್ಲಿ ವ್ಯತ್ಯಾಸ*
  • *ಮಾ.06 ರಂದು ಮಿನಿ ಉದ್ಯೋಗ ಮೇಳ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಾಲಯದಲ್ಲಿ ಅ.24ರವರೆಗೆ ದುರ್ಗಾ ನಮಸ್ಕಾರ ಪೂಜೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಾಲಯದಲ್ಲಿ ಅ.24ರವರೆಗೆ ದುರ್ಗಾ ನಮಸ್ಕಾರ ಪೂಜೆ*

ಅಕ್ಟೋಬರ್ 18, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಅ.18 :  ಪೊನ್ನಂಪೇಟೆ  ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಾಲಯದಲ್ಲಿ ಅ.15 ರಿಂದ 23ರ ವರೆಗೆ ನವರಾತ್ರಿಯ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ ಎಂದು  ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ ತಿಳಿಸಿದ್ದಾರೆ.

ಪ್ರತಿನಿತ್ಯ ಸಂಜೆ 7  ಗಂಟೆಯಿಂದ ದುರ್ಗಾ ಪೂಜೆ ನಡೆಯಲಿದ್ದು, ಅ.24 ರಂದು ಬೆಳಿಗ್ಗೆ ಯಿಂದ ವಿವಿಧ ಪೂಜೆಗಳು ಸೇರಿದಂತೆ ಚಾಮುಂಡೇಶ್ವರಿಗೆ ಮಹಾಮಂಗಳಾರತಿ ನಡೆಯಲಿದೆ ಎಂದು ತಿಳಿಸಿದರು.

ಇತಿಹಾಸ ಪ್ರಸಿದ್ದದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಬಹಳ ಹಿಂದಿನ ಕಾಲದಿಂದಲೇ ಇಲ್ಲಿ ದುರ್ಗಾ ಪೂಜೆ (ದುರ್ಗಾ ನಮಸ್ಕಾರ) ಯನ್ನು  ಹಿರಿಯರು ಆಚರಿಸಿಕೊಂಡು ಬರುತ್ತಿದ್ದಾರೆ. ಹಿಂದಿನ ಕಾಲಘಟ್ಟದಲ್ಲಿ ವಿಧ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ಈ ಹಬ್ಬ ನಡೆಯುತ್ತಿದ್ದು, ಇದೀಗ ನವರಾತ್ರಿ ಉತ್ಸವದ ಸಮಯ ಶ್ರೇಷ್ಠ ಎಂಬ ಕಾರಣಕ್ಕೆ ಹಲವು ವರ್ಷಗಳಿಂದ ನವರಾತ್ರಿಯ ಒಂಬತ್ತು ದಿನಗಳ ಕಾಲ ನವದುರ್ಗೆಯರ ಸ್ಮರಣೆ ಮಾಡುತ್ತಾ ವಿವಿಧ ಪೂಜೆಯನ್ನು ಮಾಡಲಾಗುತ್ತದೆ ಎಂದು ಚಮ್ಮಟೀರ ಸುಗುಣ ಮುತ್ತಣ್ಣ ಮಾಹಿತಿ ನೀಡಿದರು.

ಅ.15 ರಂದುರಾತ್ರಿ 7 ಗಂಟೆಗೆ ಶೈಲಪುತ್ರಿ ದೇವಿ ಪೂಜೆ, 16 ರಂದು ಬ್ರಹ್ಮಚಾರಿಣಿ ದೇವಿ, 17ರಂದು ಚಂದ್ರಘಂಟಾ ದೇವಿ, 18 ರಂದು ಕೂಶ್ಮಾಂಡ ದೇವಿ, 19 ರಂದು ಸ್ಕಂದಾಮಾತ ದೇವಿ,  20 ರಂದು ಕಾತ್ಯಾಯಿನಿ ದೇವಿ, 21 ರಂದು ಕಾಳರಾತ್ರಿ ದೇವಿ, 22 ರಂದು ಮಹಾಗೌರಿ ಅನ್ನಪೂರ್ಣೇಶ್ವರಿ ದೇವಿ, 23ರ ಆಯುಧ ಪೂಜೆಯ ದಿವಸ ಸಂಜೆ ಸಿದ್ದಿದಾತ್ರಿ ದೇವಿಗೆ ಪೂಜೆಗಳು ನಡೆಯಲಿದ್ದು, ವಿಜಯದಶಮಿಯ ಕೊನೆಯ ದಿನವಾದ  ಅ.24ರಂದು ಬೆಳಿಗ್ಗೆಯಿಂದಲೇ ವಿವಿಧ ಪೂಜಾವಿಧಿ ವಿಧಾನಗಳು ನಡೆಯಲಿದೆ.

ಅ. 23ರ ವರೆಗೆ ಸಂಜೆ 7 ಗಂಟೆಗೆ ಪೂಜೆ ಆರಂಭವಾಗಲಿದ್ದು, ಪೂಜೆ ಮಾಡಿಸುವ ಸಾರ್ವಜನಿಕರು ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಿ ಪೂಜೆಯ ಸಾಮಾಗ್ರಿಗಳ ಮಾಹಿತಿಯನ್ನು ಪಡೆದು ಪೂಜಾ ದಿನದಂದು ಸಂಜೆ 5 ಗಂಟೆಯ ಒಳಗೆ ಪೂಜಾ ಸಾಮಗ್ರಿಗಳನ್ನು ದೇವಸ್ಥಾನದ ಅರ್ಚಕರಿಗೆ ತಲುಪಿಸಬೇಕಿದೆ.

ಆಯುಧ ಪೂಜೆಯ ದಿನದಂದು ದೇವಸ್ಥಾನದಲ್ಲಿ ವಾಹನ ಪೂಜೆ ನಡೆಯಲಿದ್ದು, ಅಂದು ಸಂಜೆ  5 ಗಂಟೆಗೆ ದುರ್ಗಾ ಪೂಜೆ ನಡೆಯಲಿದೆ. ಪ್ರತಿನಿತ್ಯ ಅನ್ನಸಂತರ್ಪಣೆ ಕಾರ್ಯಕ್ರಮ ಇರುತ್ತದೆ. ನವರಾತ್ರಿ ಉತ್ಸವದ ಕೊನೆಯ ದಿನ 24ರಂದು ಬೆಳಿಗ್ಗೆಯಿಂದ ಪೂಜೆ ಇರುತ್ತದೆ. ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮದ ಬಳಿಕ ವಿವಿಧ ಪೂಜಾವಿಧಿ ವಿಧಾನಗಳು ನಡೆದು 11 ಗಂಟೆಗೆ ಚಾಮುಂಡೇಶ್ವರಿ ದೇವಿಗೆ ಹಾಗೂ ಭದ್ರಕಾಳಿಗೆ ಮಹಾಮಂಗಳಾರತಿ ನಡೆದು, ಬಳಿಗೆ ಪ್ರಸಾದ ವಿನಿಯೋಗ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ಸಾಮೂಹಿಕ ಪೂಜೆ ಮಾಡಿಸುವವರು ಹಾಗೂ ಅನ್ನಸಂತರ್ಪಣೆಗೆ ಅಕ್ಕಿ ಸೇರಿದಂತೆ ತರಕಾರಿ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ತಲುಪಿಸುವವರು ಅರ್ಚಕರು:94499 47810, ಆಡಳಿತ ಮಂಡಳಿ:9448301792, 94838 15430 ಸಂಪರ್ಕಿಸಬಹುದಾಗಿದೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಹಳೆಯ ಮೀಸಲಾತಿ ನಿಯಮಗಳಂತೆ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧರಿಸಿರುವುದು ಸ್ವಾಗತಾರ್ಹ*

ಮಾರ್ಚ್ 3, 2026

*ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ‘Whistle Blower Policy’ ಜಾರಿ – ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ*

ಮಾರ್ಚ್ 3, 2026

*ಕೊಡಗು ಪೊಲೀಸ್ ಶ್ವಾನ ದಳಕ್ಕೆ ಶ್ವಾನ ಕೊಡುಗೆ ನೀಡಿದ ಎ.ಯು.ಪೂವಯ್ಯ*

ಮಾರ್ಚ್ 3, 2026

*ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ‘Whistle Blower Policy’ ಜಾರಿ – ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ*

ಮಾರ್ಚ್ 3, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಬೆಂಗಳೂರು, NEWS DESK ಮಾರ್ಚ್ 03: ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಮುಖ್ಯ ಮಂತ್ರಿಗಳ ಆರೋಗ್ಯ ಕರ್ನಾಟಕ (AB-PM-JAY-CMs-ArK) ಯೋಜನೆಯಡಿ…

*ಕೊಡಗು ಪೊಲೀಸ್ ಶ್ವಾನ ದಳಕ್ಕೆ ಶ್ವಾನ ಕೊಡುಗೆ ನೀಡಿದ ಎ.ಯು.ಪೂವಯ್ಯ*

ಮಾರ್ಚ್ 3, 2026

*ತೋಳುರುಶೆಟ್ಟಳ್ಳಿಯಲ್ಲಿ ಅಗ್ನಿ ಅವಘಡ : ಸಿ ಆರ್ ಪಿ ಎಫ್ ಯೋಧ ಸಾವು*

ಮಾರ್ಚ್ 3, 2026

*‘ಮುಕ್ಕಾಟಿರ ಕ್ರಿಕೆಟ್ ನಮ್ಮೆ’ಯ ವೆಬ್ ಸೈಟ್ ಬಿಡುಗಡೆ ಮತ್ತು ತಂಡಗಳ ನೋಂದಣಿ ಪ್ರಕ್ರಿಯೆ ಉದ್ಘಾಟನೆ : ಅಮೋಘ ಕ್ರೀಡಾಸ್ಫೂರ್ತಿ ಕೊಡಗು ಜಿಲ್ಲೆಯಲ್ಲಿ ಮಾತ್ರ ಕಾಣಲು ಸಾಧ್ಯ : ಡಾ.ಮಂಡೇಪಂಡ ಪುಷ್ಪ ಕುಟ್ಟಣ್ಣ ಅಭಿಪ್ರಾಯ*

ಮಾರ್ಚ್ 3, 2026

*ಭಾರತದ ಆರ್ಥಿಕತೆಗೆ ಯುದ್ಧದ ‘ಶಾಕ್’:ರೂಪಾಯಿ ಮೌಲ್ಯ ಪಾತಾಳಕ್ಕೆ,ಸಾರಿಗೆ ವೆಚ್ಚ ದುಬಾರಿ!*

ಮಾರ್ಚ್ 2, 2026

*ಕೆ.ನಿಡುಗಣೆ ಗ್ರಾ.ಪಂ.ಕಚೇರಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲು ಶಾಸಕರ ಸೂಚನೆ*

ಮಾರ್ಚ್ 2, 2026

*ಯುದ್ಧ ಪರಿಸ್ಥಿತಿ : HELPLINE ಸಂಖ್ಯೆಗಳು ಇಲ್ಲಿವೆ*

ಮಾರ್ಚ್ 2, 2026

*ಮಾ.03 ರಂದು ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ದೇವಾಲಯಗಳಲ್ಲಿ ಸೇವೆಗಳಲ್ಲಿ ವ್ಯತ್ಯಾಸ*

ಮಾರ್ಚ್ 2, 2026

*ಮಾ.06 ರಂದು ಮಿನಿ ಉದ್ಯೋಗ ಮೇಳ*

ಮಾರ್ಚ್ 2, 2026

*ಚೆನ್ನಯ್ಯನಕೋಟೆ ಮತ್ತು ಕಣ್ಣಂಗಾಲದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ*

ಮಾರ್ಚ್ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.