ಮಡಿಕೇರಿ ಅ.18 : ಮಡಿಕೇರಿ ದಸರಾ ಪ್ರಯುಕ್ತ ಅ.22 ರಂದು ಆಯೋಜಿಸಲ್ಪಟ್ಟಿದ್ದ ಭಾರತದ ಹೆಸರಾಂತ ಗಾಯಕ ವಿಜಯಪ್ರಕಾಶ್ ಗಾಯನ ಕಾಯ೯ಕ್ರಮವನ್ನು ಅ.23 ರಂದು ಆಯುಧ ಪೂಜೆಗೆ ನಿಗಧಿ ಪಡಿಸಲಾಗಿದೆ. ವಿಜಯಪ್ರಕಾಶ್ ಅವರನ್ನು ಮೈಸೂರಿನಲ್ಲಿ ಭೇಟಿಯಾದ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಮಡಿಕೇರಿ ದಸರಾ ಕಾಯ೯ಕ್ರಮಕ್ಕೆ ದಸರಾ ಸಮಿತಿ ಪರವಾಗಿ ಆಹ್ವಾನ ನೀಡಿದರು.
ಶಾಸಕ ಡಾ.ಮಂಥರ್ ಗೌಡ ಅವರ ಸಹಕಾರದಲ್ಲಿ ನಡೆಯುವ ವಿಜಯಪ್ರಕಾಶ್ ಮತ್ತು ತಂಡದ ಸಂಗೀತ ರಸಮಂಜರಿ ಕಾಯ೯ಕ್ರಮವು ಅ.23 ರಂದು ಸೋಮವಾರ ರಾತ್ರಿ 8.30 ಗಂಟೆಗೆ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆ.
ಅ.22 ರಂದು ಸಂಜೆ 6 ಗಂಟೆಗೆ ಮಹಿಳಾ ದಸರಾ ಅಂಗವಾಗಿ ಜಿಲ್ಲೆಯ ಹಲವಾರು ಮಹಿಳಾ ತಂಡಗಳಿಂದ ವೈವಿಧ್ಯಮಯ ಕಾಯ೯ಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.