ಸಿದ್ದಾಪುರ ಅ.19 : ಗೋಜೊರಿಯೊ ಕರಾಟೆ ಶಾಲೆಯ ಆಶ್ರಯದಲ್ಲಿ ಎರಡು ದಿನಗಳ ರಿಕ್ಯೂ ಕೋಬೋ ಜುಟ್ಸಸು
ತರಬೇತಿ ಶಿಬಿರ ನಡೆಯಿತು.
ಸಿದ್ದಾಪುರದ ಎಸ್.ಎನ್ .ಡಿ.ಪಿ. ಸಭಾಂಗಣದಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಭಾರತೀಯ ಕೊಬೊಡೋ ಸಂಸ್ಥೆಯ ಮುಖ್ಯ ಶಿಕ್ಷಕ ಶಿಬೂಜೋ ಟಿ.ಡಿ. ಜಾನ್ಸನ್ ಹಾಗೂ ಸಹ ಶಿಕ್ಷಕ ಮೋಹನ್ ದಾಸ್ ಆಗಮಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಎರಡು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಕೋಬುಡೂ ತರಬೇತಿಯನ್ನು ನೀಡಲಾಗುತ್ತಿದೆ.
ಗೋಜೊರಿಯೊ ಕರಾಟೆ ಶಾಲೆಯ ಮುಖ್ಯ ಶಿಕ್ಷಕ ಎಂ.ಬಿ ಚಂದ್ರನ್ ಶಿಬಿರವನ್ನು ಆಯೋಜಿಸಿದ್ದು, ಶಿಬಿರದಲ್ಲಿ ಪಾಲ್ಗೊಂಡ ಕರಾಟೆ ಪಟುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಹ ಶಿಕ್ಷಕ ಸೆಂಪಾಯಿ ಸಿ.ಹೆಚ್.ಬಶೀರ್, ಅಮೋಗ್ ಗೌಡ , ಹರಿಕೃಷ್ಣ, ಆಕಾಶ್, ಸೋನಿಖಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

















