ಮಡಿಕೇರಿ ಅ.21 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ವಿಶೇಷ ಮೆರುಗನ್ನು ನೀಡುವ ದಶಮಂಟಪಗಳ ಶೋಭಾಯಾತ್ರೆಯನ್ನು ಕಾನೂನು ನಿಯಮಗಳಿಗೆ ಬದ್ಧವಾಗಿ ಆಚರಿಸಲು ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ಹೆಚ್.ಮಂಜುನಾಥ್ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಶಬ್ಧ ಮಾಲಿನ್ಯಕ್ಕೆ ಅವಕಾಶವಿಲ್ಲದಂತೆ ದಸರಾ ಶೋಭಾಯಾತ್ರೆ ನಡೆಸಲು ದಶಮಂಟಪ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಮಂಟಪಗಳು ಅನುಸರಿಸಬೇಕಾದ 17 ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದರು.
ಶೋಭಾಯಾತ್ರೆಯಲ್ಲಿ ಮಂಟಪಗಳ ಕಥಾ ಸಾರಾಂಶವನ್ನು ಜನರಿಗೆ ತಲುಪಿಸಲು ಧ್ವನಿವರ್ಧಕ ಅತ್ಯವಶ್ಯ. ಹೀಗಿದ್ದೂ ನ್ಯಾಯಾಲಯದ ಆದೇಶಗಳಿಗೆ ಬದ್ಧವಾಗಿ, ಪೊಲೀಸ್ ಇಲಾಖೆಯ ಸೂಚನೆಯಂತೆ ಅಬ್ಬರದ ಧ್ವನಿ ಬಳಕೆಗೆ ಕಡಿವಾಣ ಹಾಕಬೇಕು ಮತ್ತು ಇತಿ ಮಿತಿಯಲ್ಲಷ್ಟೆ ಧ್ವನಿವರ್ಧಕ ಬಳಸುವಂತೆ ಸ್ಪಷ್ಟ ಸೂಚನೆಯನ್ನು ದಶ ಮಂಟಪ ಸಮಿತಿಗಳಿಗೆ ನೀಡಲಾಗಿದೆ. ಶೋಭಾಯಾತ್ರೆಯ ಸಂದರ್ಭ ಪಾಶ್ಚಾತ್ಯ ಸಂಗೀತ, ಚಿತ್ರಗೀತೆಗಳಿಗೆ ಬದಲಾಗಿ ಭಕ್ತಿ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವಂತೆಯೂ ಸೂಚಿಸಲಾಗಿದೆ ಎಂದು ತಿಳಿಸಿದರು.
ಲೇಸರ್ ಲೈಟ್ಗೆ ಅವಕಾಶವಿಲ್ಲ- ಈ ಬಾರಿಯ ಶೋಭಾ ಯಾತ್ರೆಯಲ್ಲಿ ದಶ ಮಂಟಪಗಳು ‘ಲೇಸರ್ ಲೈಟ್’ ಬಳಸುವಂತಿಲ್ಲ ಮತ್ತು ಸಿಡಿಮದ್ದುಗಳನ್ನು ಮತ್ತು ಪ್ಲಾಸ್ಟಿಕ್ ಬಳಸದಂತೆ ನಿರ್ಧಾರವನ್ನು ತಳೆಯಲಾಗಿದೆಯೆಂದು ಮಾಹಿತಿಯನ್ನಿತ್ತರು.
ಈ ಬಾರಿಯ ಮಂಟಪಗಳ ಮೆರವಣಿಗೆಯಲ್ಲಿ ಆಯಾ ಸಮಿತಿಯವರು ಕೇವಲ ಎರಡು ಟ್ರ್ಯಾಕ್ಟರ್ಗಳಲ್ಲಿ ಮಾತ್ರ ಕಲಾಕೃತಿಗಳನ್ನು ಪ್ರದರ್ಶಿಸಬೇಕು ಮತ್ತು ಇತರೆ ಯಾವುದೇ ವಾಹನಗಳಲ್ಲಿ ಕಲಾಕೃತಿ ಪ್ರದರ್ಶಿಸುವಂತಿಲ್ಲ. ಧ್ವನಿವರ್ಧಕಕ್ಕೆ ಒಂದು ವಾಹನ , ಬೆಳಕಿನ ವ್ಯವಸ್ಥೆಗೆ ಒಂದು ಲಘು ವಾಹನಕ್ಕೆ ಅವಕಾಶ ನೀಡಲಾಗಿದೆ. ಆಯಾ ಮಂಟಪಗಳಲ್ಲಿ ಕಲಾಕೃತಿಗಳನ್ನು ಟ್ರ್ಯಾಕ್ಟರ್ಗಳಲ್ಲಿ ಮಾತ್ರ ಅಳವಡಿಸಬೇಕು, ಯಾವುದೇ ಕಾರಣಕ್ಕು ಕಲಾಕೃತಿಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಪ್ರದರ್ಶನ ನೀಡುವಂತಿಲ್ಲವೆಂದು ಮಂಜುನಾಥ್ ತಿಳಿಸಿದರು.
ಪ್ರತಿ ಮಂಟಪದಿಂದ ನಾಲ್ಕು ಪ್ರದರ್ಶನ- ಈ ಬಾರಿ ಪ್ರತಿ ಮಂಟಪಗಳು ತೀರ್ಪುಗಾರಿಕೆ ಸಂದರ್ಭದ ಪ್ರದರ್ಶನವನ್ನು ಹೊರತು ಪಡಿಸಿ ಕನಿಷ್ಟ ನಾಲ್ಕು ಪ್ರದರ್ಶನವನ್ನಾದರು ನೀಡಬೇಕೆಂದು ಸೂಚಿಸಲಾಗಿದೆ. ತೀರ್ಪಗಾರಿಕೆಯ ಸಂದರ್ಭ ಮಂಟಪಗಳ ಕಲಾಕೃತಿಗಳ ಕಥಾ ಸಾರಾಂಶವನ್ನು 22 ನಿಮಿಷಗಳ ಅವಧಿಯ ಒಳಗೆ ಪ್ರದರ್ಶಿಸಬೇಕು ಎಂದರು.
ತೀರ್ಪುಗಾರರ ವಿರುದ್ಧ ನಡೆದಲ್ಲಿ 3 ವರ್ಷ ನಿಷೇಧ- ದಶ ಮಂಟಪಗಳ ಶೋಭಾ ಯಾತ್ರೆಯಲ್ಲಿ ಬಹುಮಾನಗಳನ್ನು ನಿರ್ಧರಿಸಲು ತೀರ್ಪುಗಾರರ ತೀರ್ಮಾನವೆ ಅಂತಿಮವಾಗಿರುತ್ತದೆ. ಈ ಹಂತದಲ್ಲಿ ತೀರ್ಪನ್ನು ವಿರೋಧಿಸುವುದು, ತೀರ್ಪುಗಾರರ ವಿರುದ್ಧ ಘೋಷಣೆಗಳನ್ನು ಕೂಗಿದಲ್ಲಿ ಸಂಬಂಧ ಪಟ್ಟ ಮಂಟಪ ಸಮಿತಿಯನ್ನು ಮೂರು ವರ್ಷಗಳ ಕಾಲ ಸ್ಪರ್ಧೆಯಿಂದ ನಿಷೇಧಿಸಲಾಗುವುದೆಂದು ಮಂಜುನಾಥ್ ಸ್ಪಷ್ಟ ಪಡಿಸಿದರು.
ಹೆಚ್ಚಿನ ಅನುದಾನಕ್ಕೆ ಮನವಿ- ದಶಮಂಟಪ ಸಮಿತಿ ವತಿಯಿಂದ ಶಾಸಕರು ಮತ್ತು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಪ್ರತಿ ಮಂಟಪಕ್ಕೆ 4 ಲಕ್ಷ ರೂ., ಪ್ರತಿ ಕರಗಕ್ಕೆ 2.50 ಲಕ್ಷ ರೂ. ಅನುದಾನ ನೀಡುವಂತೆ ಮನವಿ ಮಾಡಲಾಗಿದೆಯೆಂದು ತಿಳಿಸಿದರು.
ದಶಮಂಟಪ ಸಮಿತಿ ಕಾರ್ಯಾಧ್ಯಕ್ಷರಾದ ಜಯಂತಿ ಆರ್ ಶೆಟ್ಟಿ ಮಾತನಾಡಿ, ಸಾಂಪ್ರದಾಯಿಕವಾದ ದಶಮಂಟಪಗಳ ಶೋಭಾಯಾತ್ರೆಯನ್ನು ಶಬ್ದ ಮಾಲಿನ್ಯಕ್ಕೆ ಅವಕಾಶವಿಲ್ಲದಂತೆ ಇತಿಮಿತಿಗಳಲ್ಲಿ ಅಚ್ಚುಕಟ್ಟಾಗಿ ಸಂಭ್ರಮದಿಂದ ನಡೆಸಲು ಸಮಿತಿ ನಿರ್ಧರಿಸಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಶಮಂಟಪ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ಜಗದೀಶ್, ಕಾರ್ಯದರ್ಶಿ ಆನಂದ್, ರಘುಪತಿ ಹಾಗೂ ಕೋದಂಡ ರಾಮ ಮಂಟಪ ಸಮಿತಿ ಅಧ್ಯಕ್ಷ ಗೋಪಿನಾಥ್ ಉಪಸ್ಥಿತರಿದ್ದರು.
Breaking News
- *ಭಾಗಮಂಡಲ ಫ್ಲೈ ಓವರ್ – ಫ್ಲಾಶ್ ಬ್ಯಾಕ್*
- *ಅರ್ಚಕರ ಮೇಲೆ ನಡೆದ ಹಲ್ಲೆ ಪ್ರಕರಣ : ಸಹಕರಿಸಿದ ಆರೋಪಿಗಳು ಹಾಗೂ ವಾಹನಗಳು ವಶ : ಆರೋಪಿಗಳಿಗೆ ಸಹಾಯ ಮಾಡುತ್ತಿರುವವರ ಕುರಿತು ಮಾಹಿತಿ ಒದಗಿಸಲು ಎಸ್ಪಿ ಮನವಿ*
- *ಮುಖ್ಯಮಂತ್ರಿಗಳಿಗೆ ಕೊಡಗು ಎಸ್ಡಿಪಿಐಯಿಂದ ಪಂಚ ಪ್ರಶ್ನೆ*
- *ಜೀವ ಬೆದರಿಕೆ ಇದೆ ಎಂದು ಆರೋಪಿಸಿ ದೂರು ನೀಡಿದ ಎನ್.ಯು.ನಾಚಪ್ಪ*
- *ಮಡಿಕೇರಿಯಲ್ಲಿ ಹುತಾತ್ಮ ದಿನಾಚರಣೆ : ಗಾಂಧೀಜಿ ತತ್ವ, ಆದರ್ಶ ಮೈಗೂಡಿಸಿಕೊಳ್ಳಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ*
- *ಕೊಡಗು : ಫೆ.13 ರವರೆಗೆ “ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ”*
- *ಒಳಮೀಸಲಾತಿ ಶೀಘ್ರ ಜಾರಿಗೆ ತರಲು ದಲಿತ ಸಂಘರ್ಷ ಸಮಿತಿ ಆಗ್ರಹ*
- *ಮೂರ್ನಾಡು ಗಜಾನನ ಯುವಕ ಸಂಘ ಖಂಡನೆ*
- *ಅಮಾಯಕರ ಮೇಲಿನ ಹಲ್ಲೆ ಖಂಡನೀಯ : ಮೂರ್ನಾಡು ಆಪ್ತಮಿತ್ರ ಬಳಗ ಅಸಮಾಧಾನ*
- *ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಸಂಭ್ರಮದ ಪುತ್ತರಿ ಒತ್ತೋರ್ಮೆ ಕೂಟ*