ಮಡಿಕೇರಿ ಅ.22 : ಮಡಿಕೇರಿ ದಸರಾ ಜನೋತ್ಸವದ ಭಾಗವಾಗಿ ಕ್ರೀಡಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ‘ಮ್ಯಾಟ್ ಕಬಡ್ಡಿ’ ನಡೆಯಿತು.
ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ದೈಹಿಕ ಸಾಮರ್ಥ್ಯ ಬಯಸುವ ಕಬಡ್ಡಿ ಕ್ರೀಡೆಯಲ್ಲಿ ಸಾಧನೆ ಮಾಡಲು ನಿರಂತರ ಪರಿಶ್ರಮ ಅಗತ್ಯ. ಕಠಿಣ ಪರಿಶ್ರಮದಿಂದ ಏನನ್ನು ಬೇಕಾದರು ಸಾಧಿಸಬಹುದಾಗಿದೆ. ದಸರಾ ಕ್ರೀಡಾ ಸಮಿತಿ ಉತ್ಸವದ ಅಂಗವಾಗಿ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವೆಂದು ಹೇಳಿದರು.
ದಸರಾ ಸಾಂಸ್ಕೃತಿಕ ಸಮಿತಿಯ ತೆನ್ನಿರ ಮೈನಾ ಮಾತನಾಡಿ, ಕ್ರೀಡೆಯಲ್ಲಿ ಜಾತಿ, ಮತ ಭೇದಗಳಿಲ್ಲ. ಇಲ್ಲಿ ಎಲ್ಲರು ಸಮಾನರಾಗಿದ್ದು, ಆಸಕ್ತಿ ಉತ್ಸಾಹ ಇರುವ ಯಾರು ಕೂಡ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಹಿನ್ನೆಲೆ ಪರಸ್ಪರ ಸೌಹಾರ್ದತೆ ಮೂಡಿಸುವ ಕ್ರೀಡಾಂಗಣವಾಗಿ ನಮ್ಮ ಸಮಾಜ ರೂಪುಗೊಳ್ಳಲಿ ಎಂದು ಹಾರೈಸಿದರು.
ಶಕ್ತಿ ದಿನಪತ್ರಿಕೆಯ ಸಂಪಾದಕರಾದ ಜಿ.ಚಿದ್ವಿಲಾಸ್ ಮಾತನಾಡಿ, ಜಾತಿ ಮತಗಳ ಎಲ್ಲೆಯನ್ನು ಮೀರಿದ ಕ್ಷೇತ್ರ ಕ್ರೀಡಾ ಕ್ಷೇತ್ರವಾಗಿದೆ. ಇಂತಹ ಕ್ರೀಡಾ ಚಟುವಟಿಕೆಗಳನ್ನು ದಸರಾ ಕ್ರೀಡಾ ಸಮಿತಿ ಆಯೋಜಿಸುವ ಮೂಲಕ ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯನ್ನು ಕಲ್ಪಿಸುತ್ತಿರುವುದು ಶ್ಲಾಘನೀಯವೆಂದರು.
::: ಸನ್ಮಾನ :::
ಇದೇ ಸಂದರ್ಭ ಹಿರಿಯ ಕಬಡ್ಡಿಪಟು, ಪ್ರಸ್ತುತ ಕ್ರೀಡಾ ತೀರ್ಪುಗಾರರಾಗಿರುವ ಕೃಷ್ಣ, ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಮಾಜಿ ಜಂಟಿ ಕಾರ್ಯದರ್ಶಿ ಹೆಚ್.ಎಸ್.ಉತ್ತಪ್ಪ, ಮಡಿಕೆೆÃರಿ ದಸರಾ ಕ್ರೀಡಾ ಸಮಿತಿ ಅಧ್ಯಕ್ಷÀ ಪ್ರದೀಪ್ ಕರ್ಕೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಿವೈಎಸ್‌ಪಿ ಜಗದೀಶ್, ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷÀ ಸತೀಶ್, ಸದಸ್ಯ ಮನ್ಸೂರ್, ಪ್ರಮುಖರಾದ ರಘು ಚಂಗಪ್ಪ, ಶಶಿ, ಮಣಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಕ್ರೀಡಾ ಸಮಿತಿಯ ಕಪಿಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
::: ಪೊಲೀಸರಿಗೆ ಗೆಲುವು :::
ಮೊದಲ ಪಂದ್ಯದಲ್ಲಿ ಕೊಡಗು ಪೊಲೀಸ್ ತಂಡ ಎದುರಾಳಿ ಭಾಗಮಂಡಲದ ಗಜಾನನ ತಂಡವನ್ನು ಸೋಲಿಸಿತು. ಪಂದ್ಯಾವಳಿಯಲ್ಲಿ ಒಟ್ಟು 15 ತಂಡಗಳು ಪಾಲ್ಗೊಂಡಿದ್ದವು.












