ಮಡಿಕೇರಿ ಅ.24 : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ದಶಮಂಟಪಗಳ ಸಾರಥಿ ಎಂದೇ ಖ್ಯಾತಿ ಪಡೆದಿರುವ 150 ವರ್ಷಗಳ ಇತಿಹಾಸ ಹೊಂದಿರುವ ಪೇಟೆ ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ ಮಂಟಪದಲ್ಲಿ ವೈಕುಂಠ ದರ್ಶನ ಕಥಾ ಸಾರಾಂಶವನ್ನು ಪ್ರದರ್ಶಿಸಲಿದೆ.
ಒಂದು ಟ್ರ್ಯಾಕ್ಟರ್, 10 ಕಲಾಕೃತಿಗಳು, ದಿಂಡಿಗಲ್‌ನ ಸೆಲ್ವಂ ಎಲೆಕ್ಟ್ರಿಕಲ್ ನವರ ಲೈಟಿಂಗ್ ಬೋರ್ಡ್ ಇರಲಿದೆ. ಪ್ಲಾಟ್‌ಫಾರಂ ನಿರ್ಮಾಣ ಮತ್ತು ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ನ್ನು ಸಮಿತಿ ಸದಸ್ಯರೆ ಮಾಡಲಿದ್ದಾರೆ. ಧ್ವನಿವರ್ಧಕ ಮತ್ತು ಸ್ಟುಡಿಯೋ ಲೈಟ್ ವ್ಯವಸ್ಥೆಯನ್ನು ಮಡಿಕೇರಿಯ ಮರ್ಕರ ಪವರ್ ನವರು ಒದಗಿಸಲಿದೆ. ಒಟ್ಟು 8 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ ಎಂದು ಅಧ್ಯಕ್ಷ ಭರತ್ ಬಿದ್ದಪ್ಪ ತಿಳಿಸಿದ್ದಾರೆ.










