ಮಡಿಕೇರಿ ಅ.24 : ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ 28ನೇ ವರ್ಷದ ಉತ್ಸವ ಆಚರಿಸುತ್ತಿದ್ದು, ಉಗ್ರನರಸಿಂಹನಿಂದ ಹಿರಣ್ಯಕಶ್ಯಪು ಸಂಹಾರ ಕಥಾ ಸಾರಾಂಶವನ್ನು ಅಳವಡಿಸಲಾಗಿದೆ ಎಂದು ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಪಿ.ಜಿ. ಗಜೇಂದ್ರ (ಕುಶ) ತಿಳಿಸಿದ್ದಾರೆ. ಎರಡು ಟ್ರಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‌ನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದು, ಸಮಿತಿ ಸದಸ್ಯರೇ ಫ್ಲಾಟ್ ಫಾರಂ ನಿರ್ಮಾಣ ಮಾಡಲಿದ್ದಾರೆ. ಮಡಿಕೇರಿಯ ಸ್ಕಂದ ಸಂಸ್ಥೆಯವರು ಧ್ವನಿವರ್ಧಕವನ್ನು ಒದಗಿಸಲಿದ್ದು, ಬೆಂಗಳೂರಿನ ಅನುಪ್ರೋ ಈವೆಂಟ್ ನವರು ಸ್ಟುಡಿಯೋ ಸೆಟ್ಟಿಂಗ್ ಮಾಡಲಿದ್ದಾರೆ. ಫೈರ್ ಎಫೆಕ್ಟನ್ನು ಬೆಂಗಳೂರಿನ ಸ್ಟಾನಿ ಎಫ್‌ಎಕ್ಸ್ ತಂಡ ನೀಡಲಿದೆ. 22 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ನಾಗರಾಜ್ ತಂಡ ಹಾಗೂ ಮಡಿಕೇರಿಯ ಶೋಮ್ಯಾನ್ ಕ್ರಿಯೇಷನ್ಸ್ ಕಲಾಕೃತಿಗಳನ್ನು ತಯಾರಿಸಿದ್ದಾರೆ.
ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ನ್ನು ಶೋಮ್ಯಾನ್ ಕ್ರಿಯೇಷನ್ಸ್ ತಂಡ ಮಾಡಲಿದ್ದು, ಕಲಾಕೃತಿಗಳಿಗೆ ಚಲನವಲನವನ್ನು ಸಮಿತಿ ಸದಸ್ಯರೆ ನೀಡಲಿದ್ದಾರೆ. ರೂ.22 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಕೊಡಗಿನ ವಾಲಗ ಮಂಟಪವನ್ನು ಮುನ್ನಡೆಸಲಿದೆ. ಜನಾಕರ್ಷಣೆ ಜೊತೆಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುತ್ತದೆ ಎಂದು ಗಜೇಂದ್ರ (ಕುಶ) ಮಾಹಿತಿ ನೀಡಿದ್ದಾರೆ.










