ಮಡಿಕೇರಿ ಅ.24 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕಂಚಿಕಾಮಾಕ್ಷಿ ಮುತ್ತು ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 60ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗಿದ್ದು, ಈ ಬಾರಿ ಶಿವನಿಂದ ತ್ರಿಪುರಾಸುರರ ವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಜಿ.ಆರ್.ರಾಘವೇಂದ್ರ ತಿಳಿಸಿದ್ದಾರೆ.
ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್‌ನ ಡೇವಿಡ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಧ್ವನಿವರ್ಧಕವನ್ನು ಬೆಳಗಾಂನ ಕೃಷ್ಣ ಸಂಸ್ಥೆ ಒದಗಿಸಲಿದ್ದು, ಚೆನ್ನೈನ ಸನ್‌ಬರ್ನ್ ಸಂಸ್ಥೆ ಸ್ಟುಡಿಯೋ ಸೆಟ್ಟಿಂಗ್ಸ್ ಹಾಗೂ ಮುಂಬೈನ ಸನ್‌ಬರ್ನ್ ಸಂಸ್ಥೆ ಫೈರ್ ಎಫೆಕ್ಟ್ ಕಲ್ಪಿಸಲಿದೆ. ಪ್ಲಾಟ್ ಫಾರಂನ್ನು ಸೈಜು ಮತ್ತು ಸಮಿತಿ ಸದಸ್ಯರು ನಿರ್ಮಿಸಿದ್ದಾರೆ. ಟ್ರಾ÷್ಯಕ್ಟರ್ ಸೆಟ್ಟಿಂಗ್ಸ್ನ್ನು ಬಿಪಿನ್ ಮತ್ತು ತಂಡ ಸೆಂಟ್ ಆಂಟೋನಿ ಫ್ಯಾಬ್ರಿಕೇಶನ್, ಎಸ್.ಎಲ್. ರಹಮತ್ ನಿಸಾ ಇಂಜಿನಿಯರಿಂಗ್ ತಂಡ ಮಾಡಲಿದೆ. 28 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾಕೃತಿಗಳನ್ನು ತಯಾರಿಸಿದ್ದಾರೆ. ಎಲ್‌ಇಡಿ ಎಫೆಕ್ಟನ್ನು ಪ್ರಮೋದ್ ಪರ್ಫೆಕ್ಟ್ ಈವೆಂಟ್, ಲೇಜರ್ ಶೋವನ್ನು ಮನೋಜ್ ಒದಗಿಸಲಿದ್ದಾರೆ. ಮಂಟಪ ರಚನೆ ಹಾಗೂ ಚಲನವಲನವನ್ನು ಮಡಿಕೇರಿಯ ಶೋಮ್ಯಾನ್ ಕ್ರಿಯೇಷನ್ಸ್ ತಂಡ ನಿರ್ವಹಿಸಲಿದ್ದು, ಧ್ವನಿಮುದ್ರಣವನ್ನು ಸುಂಟಿಕೊಪ್ಪದ ಎಜೆ ಸ್ಟುಡಿಯೋ ಹಾಗೂ ಶೋಮ್ಯಾನ್ ಕ್ರಿಯೇಷನ್ ಕಲಾವಿದರು ಮಾಡಲಿದ್ದಾರೆ ಎಂದು ರಾಘವೇಂದ್ರ ವಿವರಿಸಿದರು.
ಒಟ್ಟು 27 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗುತ್ತಿದ್ದು, ಜನಾಕರ್ಷಣೆಗೆ ಒತ್ತು ನೀಡುವುದರೊಂದಿಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುವುದು ಎಂದು ರಾಘವೇಂದ್ರ ತಿಳಿಸಿದ್ದಾರೆ.









