ಮಡಿಕೇರಿ ಅ.24 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ 48ನೇ ವರ್ಷದ ಉತ್ಸವ ಆಚರಿಸುತ್ತಿದ್ದು, ಕೃತಿಬಾಸ ರಾಮಾಯಣದಿಂದ ಆಯ್ದ ಪಂಚಮುಖಿ ಆಂಜನೇಯನಿಂದ ಅಹಿರಾವಣ- ಮಹಿರಾವಣ ವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷರುಗಳಾದ ಪ್ರಭು ರೈ ಹಾಗೂ ರಾಜಾ ಸುಬ್ಬಯ್ಯ ತಿಳಿಸಿದ್ದಾರೆ.
ಎರಡು ಟ್ರಾ÷್ಯಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ಈ ಬಾರಿ ದಿಂಡಿಗಲ್‌ನ ಕಳೇಯಗಂ ಲೈಟಿಂಗ್ ಬೋರ್ಡ್ ಅಳವಡಿಸಲಿದೆ. ಮಡಿಕೇರಿಯ ಶಕ್ತಿ ವಿನಾಯಕ ಈವೆಂಟ್ ಮ್ಯಾನೇಜ್‌ಮೆಂಟ್‌ನ ಪ್ರಶಾಂತ್ ನೇತೃತ್ವದಲ್ಲಿ ಬೆಂಗಳೂರಿನ ಪ್ರೀತಿ ಸೌಂಡ್ಸ್ ಸಂಸ್ಥೆ ಧ್ವನಿವರ್ಧಕ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್ ಮಾಡಲಿದೆ. ಪ್ಲಾಟ್‌ಫಾರಂನ್ನು ಟೀಂ ಕೆಎಂಟಿ ಮಾಡಲಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಹಾಗೂ ಕಲಾಕೃತಿಗಳಿಗೆ ಚಲನವಲನ ವ್ಯವಸ್ಥೆಯನ್ನು ಟೀಂ ಕೆ.ಎಂ.ಟಿ.ಯ ಜಿ.ಸಿ.ಜಗದೀಶ್, ಪ್ರಸಾದ್ ಆಚಾರ್ಯ ತಂಡ ಮಾಡಲಿದೆ.
ಒಟ್ಟು 17 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಹಾಗೂ ಮಡಿಕೇರಿಯ ಆರ್ವಿನ್ ಹಾಗೂ ರಾಕೇಶ್ ತಂಡ ಕಲಾಕೃತಿಗಳನ್ನು ತಯಾರಿಸಲಿದೆ. ಫೈ ಎಫೆಕ್ಟನ್ನು ಬೆಂಗಳೂರಿನ ಮಸೂದ್ ಹಾಗೂ ಸಮಿತಿಯ ತೀರ್ಥ ಮತ್ತು ತಂಡ ನೀಡಲಿದೆ. ಒಟ್ಟು 25 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆಯೊಂದಿಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುತ್ತದೆ ಎಂದು ಪ್ರಭು ರೈ ಹಾಗೂ ರಾಜಾ ಸುಬ್ಬಯ್ಯ ಮಾಹಿತಿ ನೀಡಿದ್ದಾರೆ.










