ಮಡಿಕೇರಿ ಅ.24 : ಕೋದಂಡ ರಾಮ ದಸರಾ ಮಂಟಪ ಸಮಿತಿ 49ನೇ ವರ್ಷದ ದಸರಾ ಉತ್ಸವ ಆಚರಿಸಿದ್ದು, “ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನೆ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷರಾಗಿ ಗೋಪಿನಾಥ್ ತಿಳಿಸಿದ್ದಾರೆ.
ರೂ.20 ಲಕ್ಷ ರೂ.ವೆಚ್ಚದಲ್ಲಿ ಮಂಟಪ ನಿರ್ಮಾಣವಾಗಿದ್ದು, 25 ಕಲಾಕೃತಿಗಳಿದ್ದು, ಮೈಸೂರು ಜಿಲ್ಲೆಯ ಉದೂರಿನ ಮಹದೇವಪ್ಪ ಮತ್ತು ನಾಗರಾಜು ಕಲಾಕೃತಿಗಳನ್ನು ನಿರ್ಮಿಸುತ್ತಿದ್ದಾರೆ. ಮಡಿಕೇರಿ ಗೌತಮ್ ಮತ್ತು ಸಂದು ಸ್ಟುಡಿಯೋ ಸೆಟ್ಟಿಂಗ್ ಹಾಗೂ ಫಯರ್‌ವರ್ಕ್ ಮಾಡಲಿದ್ದಾರೆ.
ಪ್ಲಾಟ್‌ಫಾರ್ಮ್ ಸೆಟ್ಟಿಂಗ್ ಅನ್ನು ಸಮಿತಿಯ ಸದಸ್ಯರೇ ನಿರ್ವಹಿಸಲಿದ್ದಾರೆ. ಟ್ರಾ÷್ಯಕ್ಟ ಸೆಟ್ಟಿಂಗ್ ಹಾಗೂ ಚಲನವಲನವನ್ನು ಹೇಮರಾಜ್ ಮತ್ತು ತಂಡ ವಹಿಸಿಕೊಂಡಿದೆ. ಸೋಮದಾರಪೇಟೆ ಧ್ವನಿವರ್ಧಕವನ್ನು ಅಳವಡಿಸುತ್ತಿದೆ.










