ಮಡಿಕೇರಿ ಅ.24 : ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಿಯಮ್ಮ ದೇವಾಲಯವರಾ ಮಂಟಪ ಸಮಿತಿ ಈ ಬಾರಿ 93ನೇ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಪರಶಿವನಿಂದ ಜಲಂಧರ ಸಂಹಾರ ಕಥಾ ಸಾರಾಂಶವನ್ನು ಹೊಂದಿದೆ ಎಂದು ದಸರಾ ಸಮಿತಿ ಅಧ್ಯಕ್ಷ ಅಂಬೆಕಲ್ ನವೀನ್ ತಿಳಿಸಿದ್ದಾರೆ.
ರೂ.20 ಲಕ್ಷ ವೆಚ್ಚದಲ್ಲಿ ಮಂಟಪ ತಯಾರಿಯಾಗಿದ್ದು, ಮಂಟಪದಲ್ಲಿ 23 ಕಲಾಕೃತಿಗಳು ಇರಲಿದೆ. ಮಂಟಪದಲ್ಲಿ ಕಾಲಿಕಟ್ ಏಷಿಯನೆಟ್ ಸ್ಟುಡಿಯೋ ಅಂತೋಣಿ ಸ್ಟುಡಿಯೋ ಸೆಟ್ಟಿಂಗ್ ಮಾಡಲಿದ್ದಾರೆ, ದಿಂಡಿಗಲ್, ಎಂ.ಪಿ. ಲೈಟಿಂಗ್ ಬೋರ್ಡ್ ವ್ಯವಸ್ಥೆ ಮಾಡಲಿದ್ದಾರೆ. 150ಕ್ಕೂ ಅಧಿಕ ಮಂದಿ ಸದಸ್ಯರು ತಂಡದಲ್ಲಿದ್ದಾರೆ, ವಿಯನ್ ಇಂಜಿನಿಯರಿಂಗ್ ವರ್ಕ್ ಪ್ಲಾಟ್ ಫಾರ್ಮ, ಚಲನವಲನವನ್ನು ತಂಡದ ಸದಸ್ಯರೇ ಮಾಡಲಿದ್ದಾರೆ. ಮಡಿಕೇರಿಯ ಅಶ್ರಫ್, ಪ್ರಕಾಶ್ ತಂಡ ಸ್ಪೆಷಲ್ ಎಫೆಕ್ಟ್ ನೀಡಲಿದೆ. ಬೆಂಗಳೂರಿನ ಎಲ್ಲೋ ಸೌಂಡ್ಸ್ ಇರಲಿದೆ. ಕಲಾಕೃತಿಗಳನ್ನು ಅಸ್ತಿತ್ವ ಆರ್ಟಿ ಸುನಿ ಮತ್ತು ಮನು ತಂಡ ಕಲಾತ್ಮಕವಾಗಿ ಮಾಡುತ್ತಿದೆ. ಮೋಹನ್ ಮತ್ತು ಸಂಪತ್ ಟ್ಯಾಕ್ಟರ್, ಸೆಟ್ಟಿಂಗ್, ಬಿನ್ ಮತ್ತು ತಂಡ ಕಥಾ ಸಾರಾಂಶ ರಚಿಸಿದ್ದಾರೆ.










