ಮಡಿಕೇರಿ ಅ.24 : 47ನೇ ವರ್ಷದ ದಸರಾ ಉತ್ಸವದಲ್ಲಿರುವ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಹಾಗಣಪತಿ ದೇವಾಲಯ ಸಮಿತಿಯಿಂದ ಈ ಬಾರಿ ಮಹಾ ಗಣಪತಿಯಿಂದ ಶತಮಾಹಿಷೆಯ ಸಂಹಾರ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದ್ದು, ಮಂಟಪಕ್ಕಾಗಿ ಸುಮಾರು ರೂ.31.5 ಲಕ್ಷ ವೆಚ್ಚ ಮಾಡಲಾಗುತ್ತಿದೆ.
ದೇವಾಲಯದ ದಸರಾ ಸಮಿತಿ ಅಧ್ಯಕ್ಷರಾಗಿ ಹೆಚ್.ಪಿ. ಲೋಕೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಟಪದಲ್ಲಿ 30 ಕಲಾಕೃತಿಗಳು ಇರಲಿದೆ. ದೇವಾಲಯ ಸಮಿತಿಯಲ್ಲಿ ಸುಮಾರು 372 ಮಂದಿ ಸದಸ್ಯರಿದ್ದಾರೆ.
ಮಂಟಪದಲ್ಲಿ ಅಳವಡಿಸಲಾಗುತ್ತಿರುವ ಕಥೆಯನ್ನು ಆರ್.ಬಿ. ರವಿ ನಿರ್ದೇಶಿಸಿದ್ದಾರೆ. ಮಡಿಕೇರಿಯ ಫ್ಯೂಚರ್ ಇವೆಂಟ್ ಸ್ಟುಡಿಯೋ ಸೆಟ್ಟಿಂಗ್ ಹಾಗೂ ಸೌಂಡ್ಸ್ ಸೆಟ್ಟಿಂಗ್ ಮಾಡಲಿದೆ. ಮಡಿಕೇರಿಯ ಪೂಜಾ ಲೈಟಿಂಗ್ ಆರ್ಚ್ ಬೋರ್ಡ್ ವ್ಯವಸ್ಥೆ ಮಾಡಲಿದೆ. ಗಣೇಶ್ ಹಾಗೂ ಸೋಮಶೇಖರ್ ಟ್ರಾö್ಯಕ್ಟರ್ ಸೆಟ್ಟಿಂಗ್ ಮಾಡಲಿದ್ದಾರೆ.
ಮಡಿಕೇರಿಯ ಬಿ.ಎನ್. ಕ್ರಿಯೇಷನ್‌ನ ಮೋಹನ್ ಹಾಗೂ ಪುನಿತ್ ಅವರು ವೆಲ್ಡಿಂಗ್, ಚಲನವಲನ ಹಾಗೂ ಫ್ಲಾರ್ಟ್ ಫಾರಂ ಸೆಟ್ಟಿಂಗ್ ಮಾಡಲಿದ್ದಾರೆ. ಮಡಿಕೇರಿಯ ಪೂಜಾ ಲೈಟಿಂಗ್‌ನ ರಘು ಮತ್ತು ತಂಡ ಕಲಾಕೃತಿಗಳಿಗೆ ವಿಶೇಷ ಎಫೆಕ್ಟ್ ನೀಡಲಿದ್ದಾರೆ. ಮಡಿಕೇರಿಯ ಟೀಂ 99 ಫಯರ್ ವರ್ಕ್ ಮಾಡಲಿದೆ. ಮುಂಬೈನಿoದಲೂ ವಿಶೇಷ ಎಫೆಕ್ಟ್ ನೀಡಲಾಗುತ್ತಿದೆ.











