ಸುಂಟಿಕೊಪ್ಪ ಅ.25 : ಸುಂಟಿಕೊಪ್ಪ ವಾಹನ ಚಾಲಕರ ಸಂಘದ 53ನೇ ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆಯಿತು. ಆಯುಧ ಪೂಜಾ ಸಮಾರಂಭದ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವರ್ಕ್ ಶಾಪ್ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶಬರಿ ಆಟೋ ವರ್ಕ್ಸ್, ದ್ವಿತೀಯ ಬಹುಮಾನ ವೆಂಕಟರಮಣ ಟಯರ್ ವರ್ಕ್ಸ್ ಪಡೆಯಿತು.
ಕಚೇರಿ ಅಲಂಕಾರ ಸ್ಪರ್ಧೆಯಲ್ಲಿ ಕೆ. ಇ.ಬಿ. ಪ್ರಥಮ, ಪೊಲೀಸ್ ಠಾಣೆ ದ್ವಿತೀಯ ಮತ್ತು ಗ್ರಾಮ ಪಂಚಾಯತಿ ಕಚೇರಿ ತೃತೀಯ ಬಹುಮಾನ ಗಳಿಸಿತು.
ಅಂಗಡಿ ಅಲಂಕಾರ ಸ್ಪರ್ಧೆಯಲ್ಲಿ ಶ್ರೀಮಾನ್ ಎಂಟರ್ ಪ್ರೈಸಸ್ ಪ್ರಥಮ ಬಹುಮಾನ, ಅಶ್ರಫ್ ಸ್ಟೂಡೆಂಟ್ ಕಾರ್ನರ್ ದ್ವಿತೀಯ ಬಹುಮಾನ ಪಡೆಯಿತು.
ಲಘು ವಾಹನ ಅಲಂಕಾರ ಸ್ಪರ್ಧೆಯಲ್ಲಿ ಆನಂದ ಪ್ರಥಮ, ನಾಗಪ್ಪ ದ್ವಿತೀಯ ಮತ್ತು ಪಟ್ಟೆಮನೆ ಹರ್ಷ ತೃತೀಯ ಬಹುಮಾನ ಪಡೆದರು.
ಶಿವಮಣಿ ಅವರು ಆಟೋ ರಿಕ್ಷಾ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದರು.
ವಿಜೇತರಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳು ಸೇರಿದಂತೆ ವಾಹನ ಚಾಲಕರ ಸಂಘದ ಅಧ್ಯಕ್ಷ ಅಧ್ಯಕ್ಷ ಎಸ್.ಸುರೇಶ, ಉಪಾಧ್ಯಕ್ಷ ಅಂಬೆಕಲ್ ಚಂದ್ರಶೇಖರ್, ಮುನೀರ್, ಬಿ.ಎ.ಕೃಷ್ಣಪ್ಪ, ಗೌರವ ಅಧ್ಯಕ್ಷ ಬಿ.ಎಂ.ಪೂವಪ್ಪ,ಹೆಚ್.ಹಂಸ,(ಅಚ್ಚುಪ್ಪ),ಕಾರ್ಯದರ್ಶಿ ಎಂ.ಕೆ.ಕುಞಕೃಷ್ಣ, ಖಜಾಂಚಿ ಅಜೀಜ್, ಜಂಟಿ ಕಾರ್ಯದರ್ಶಿ ವಿನೋದ್, ಸಂಘಟನಾ ಕಾರ್ಯದರ್ಶಿ ಕೆ.ಎಸ್.ವಿನೋದ್, ಅಬ್ದುಲ್ ಜಬ್ಬಾರ್, ಸಾಂಸ್ಕೃತಿಕ ಕಾರ್ಯದರ್ಶಿ ಬಿ.ಎ.ಶರೀಫ್, ಕೆ.ಎಚ್. ತನ್‌ಜೀರ್ ಸಂಘದ ಪದಾಧಿಕಾರಿಗಳು ಬಹುಮಾನ ವಿತರಿಸಿದರು.











