ನಾಪೋಕ್ಲು ಅ.26 : ಶೌರ್ಯ ತಂಡದ ಸದಸ್ಯರು ಶ್ರಮದಾನದ ಮೂಲಕ ಕೊಳಕೇರಿ ಅಂಗನವಾಡಿ ಕೇಂದ್ರದ ಸುತ್ತ ಕಾಡು ಗಿಡ ಗಂಟಿಗಳನ್ನು ಕಡಿದು ಸ್ವಚ್ಚಗೊಳಿಸಿದರು.
ಅಂಗನವಾಡಿ ಸುತ್ತು ಮುತ್ತು ಗಿಡ ಗಂಟಿಗಳು ಕಡಿದು, ಕಸಕಡ್ಡಿಗಳನ್ನು ಹೆಕ್ಕಿ ಸ್ವಚ್ಚಗೊಳಿಸಿದರು.
ಇವರ ಕಾರ್ಯಕ್ಕೆ ಅಂಗನವಾಡಿ ಶಿಕ್ಷಕಿ ಶಾಂತಿ ಹಾಗೂ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.
ಶ್ರಮದಾನದಲ್ಲಿ ಶೌರ್ಯ ತಂಡದ ಸದಸ್ಯ ಗೀತಾ, ಆಶಾ, ದಿಲೀಶ್, ಚೇತನ್, ಶಂಕರ್, ಶರವಣ, ದಮಯಂತಿ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ








