ನಾಪೋಕ್ಲು ಅ.26 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿರುವ ತುಲ್ಯಾರು ಹತ್ತರ ಆರಾಧನೋತ್ಸವ (ಪತ್ತಲೋದಿ ಉತ್ಸವ) ಅ.27 ರಂದು ನಡೆಯಲಿದೆ ಎಂದು ಪರದಂಡ ಸುಬ್ರಮಣಿ ಕಾವೇರಪ್ಪ ತಿಳಿಸಿದ್ದಾರೆ.
ತುಲಾಭಾರ ಸೇವೆಗಳು ಮತ್ತು ಪೂಜಾ ಸೇವೆಗಳು ಎಂದಿನಂತೆ ನಡೆಯಲಿದ್ದು, ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪಾಲ್ಗೊಳ್ಳಬೇಕೆಂದು ದೇವತಕ್ಕರಾದ ಪರದಂಡ ಕುಟುಂಬಸ್ಥರ ಪರವಾಗಿ ಪರದಂಡ ಸುಬ್ರಮಣಿ ಕಾವೇರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದರು.
ವರದಿ : ದುಗ್ಗಳ ಸದಾನಂದ








