ನಾಪೋಕ್ಲು ಅ.26 : ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಮಾನ್ಯತೆ ಪಡೆದ ಕೊಡವ ಕುಟುಂಬಗಳ ನಡುವೆ 2024ರ ಏ.15 ರಂದು ನಡೆಯಲಿರುವ ಹಗ್ಗ ಜಗ್ಗಾಟ ಸ್ಪರ್ಧೆ ಬೊಟ್ಟೋಳಂಡ ಕಪ್ ಪಂದ್ಯಾವಳಿಯ ಲೋಗೋ ಬಿಡುಗಡೆ ಕಾರ್ಯಕ್ರಮ ಅ.29 ರಂದು ಕಡಗದಾಳುವಿನಲ್ಲಿ ನಡೆಯಲಿದೆ ಎಂದು ಬೊಟ್ಟೋಳಂಡ ಕಪ್ ಸಂಚಾಲಕ ಬೊಟ್ಟೋಳಂಡ ಮಿಟ್ಟು ಪೂಣಚ್ಚ ಹೇಳಿದರು.
ನಾಪೋಕ್ಲುವಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಡಗದಾಳುವಿನ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಟ್ಟೋಳಂಡ ಪೂಣಚ್ಚ (ಅಚ್ಚಿ) ವಹಿಸಲಿದ್ದು, ವೇದಿಕೆಯಲ್ಲಿ ಕಾಫಿ ಬೆಳೆಗಾರ ವಾಸು ಮುತ್ತಪ್ಪ, ನಿವೃತ್ತ ಸರ್ಕಲ್ ಇನ್ಸ್ ಪೆಕ್ಟರ್ ಬೊಟ್ಟೋಳಂಡ ಲಿಂಗಪ್ಪ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕ್ ಇನ್ಸ್ ಪೆಕ್ಟರ್ ತೀತೀರ ಅಪ್ಪಚ್ಚು, ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಅಧ್ಯಕ್ಷ ಪೊನ್ನೊಲತಂಡ ಕಿರಣ್ ಪೊನ್ನಪ್ಪ ಪಾಲ್ಗೊಳ್ಳಲಿರುವರು.
ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಟ್ಟ ಸ್ಪರ್ಧೆಯನ್ನು ಪ್ರಥಮವಾಗಿ 2022 ರಲ್ಲಿ ಪೊನ್ನೊಲತಂಡ ಕುಟುಂಬಸ್ಥರು ಕಕ್ಕಬ್ಬೆಯಲ್ಲಿ ಆರಂಭಿಸಿದ್ದರು. ಎರಡನೇ ವರ್ಷದ ಹಗ್ಗಜಗ್ಗಾಟ ಸ್ಪರ್ಧೆ 2023 ರಲ್ಲಿ ಟಿ-ಶೆಟ್ಟಿಗೇರಿಯಲ್ಲಿ ಚಟ್ಟಂಗಡ ಕುಟುಂಬಸ್ಥರು ನಡೆಸಿದ್ದು ಮೂರನೇ ವರ್ಷದ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಬೊಟ್ಟೋಳಂಡ ಕುಟುಂಬಸ್ಥರು ನಾಪೋಕ್ಲುವಿನ ಜೂನಿಯರ್ ಕಾಲೇಜು ಮೈದಾನದಲ್ಲಿ 15 ಏಪ್ರಿಲ್ 2024 ರಿಂದ 4 ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಮಿಟ್ಟು ಪೂಣಚ್ಚ ಹೇಳಿದರು.
ಕ್ರೀಡೋತ್ಸವದಲ್ಲಿ ಪ್ರತಿ ಕುಟುಂಬಗಳು ಹೆಸರು ನೊಂದಾಯಿಸಿಕೊಂಡು ಕಾರ್ಯಕ್ರಮಕ್ಕೆ ಸಹಕರಿಸಿ ಪ್ರೋತ್ಸಾಹಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು
ಬೊಟ್ಟೋಳಂಡ ಕಪ್ ಕಾರ್ಯಾಧ್ಯಕ್ಷ ಬೊಟ್ಟೋಳಂಡ.ಬಿ.ಗಣೇಶ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬೊಟ್ಟೋಳಂಡ ಕಪ್ ಖಜಾಂಚಿ ಬೊಟ್ಟೋಳಂಡ ರಮೇಶ್ ಪೊನ್ನಯ್ಯ, ಸಹ ಕಾರ್ಯದರ್ಶಿ ಬೊಟ್ಟೋಳಂಡ.ಯು.ರವಿ ಕರುಂಬಯ್ಯ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ








